ಮೈಸೂರು

ಮೊಬೈಲ್ ನಲ್ಲಿ ಮಾತನಾಡುತ್ತ ತೆರಳುತ್ತಿದ್ದ ಶಿಕ್ಷಕಿ ಕತ್ತಿನಿಂದ ಸರ ಅಪಹರಣ

ಮೈಸೂರು,ಮಾ.22:- ಮೊಬೈಲ್ ನಲ್ಲಿ ಮಾತನಾಡುತ್ತ ತೆರಳುತ್ತಿದ್ದ ಶಿಕ್ಷಕಿಯೋರ್ವರ ಕತ್ತಿಗೆ ಕೈಹಾಕಿ ಖದೀಮನೋರ್ವ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಆಲನಹಳ್ಳಿಯಲ್ಲಿ ನಡೆದಿದೆ.

ಶಿಕ್ಷಕಿ ಪೂರ್ಣಿಮಾ(29) ಎಂಬವರು ಆಲನಹಳ್ಳಿ 6ನೇ ರಸ್ತೆಯಲ್ಲಿ ಶಾಲೆಯಿಂದ ಮನೆಗೆ ಮೊಬೈಲ್ ನಲ್ಲಿ ಮಾತನಾಡುತ್ತ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಪಲ್ಸರ್ ಬೈಕಿನಲ್ಲಿ ಬಂದ  ಕಳ್ಳನೋರ್ವ ಅವರ ಕುತ್ತಿಗೆಯಲ್ಲಿದ್ದ 30ಗ್ರಾಮ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: