ಮೈಸೂರು

ಪತಿ ಕೋಪಿಸಿಕೊಂಡಿದಕ್ಕೆ ಪತ್ನಿ ನೇಣಿಗೆ ಶರಣು

ಮೈಸೂರು,ಮಾ.22:- ಪತಿ ಕೋಪಿಸಿಕೊಂಡಿದ್ದನೆಂಬ ಕಾರಣಕ್ಕೆ ಪತ್ನಿ ನೇಣಿಗೆ ಶರಣಾದ ಘಟನೆ ಕುವೆಂಪುನಗರದ ಐ ಬ್ಲಾಕ್ ನಲ್ಲಿ ನಡೆದಿದೆ.

ಮೃತರನ್ನು ಐ ಬ್ಲಾಕ್ ನ ಅನಿಕೇತನ ರಸ್ತೆಯ ನಿವಾಸಿ ಅರ್ಚನಾ(33)ಎಂದು ಗುರುತಿಸಲಾಗಿದೆ. ಇವರು  ಮಹೇಶ್ ಎಂಬವರನ್ನು ಹತ್ತು ವರ್ಷದ ಹಿಂದೆ ವಿವಾಹವಾಗಿದ್ದರು. ಇವರಿಗೆ 9ವರ್ಷದ ಮಗಳಿದ್ದಾಳೆ. ಸಣ್ಣಪುಟ್ಟ ವಿಚಾರಗಳಿಗೂ ಅರ್ಚನಾ ಕೋಪಿಸಿಕೊಳ್ಳುತ್ತಿದ್ದರು.   ನಂಜನಗೂಡಿಗೆ ಹೊರಟಿದ್ದ ಪತಿ ತಿಂಡಿ ಮಾಡದೇ ಇರುವುದಕ್ಕೆ ಪತ್ನಿಯ ಮೇಲೆ ಕೋಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಮರಳಿ ಬಂದಾಗಲೂ ಇಬ್ಬರ ನಡುವೆ ಮಾತುಕತೆ ನಡೆದಿರಲಿಲ್ಲ. ಆದರೆ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: