ಮೈಸೂರು

ಪುತ್ರನ ಮೇಲೆ ಕೋಪಗೊಂಡ ತಂದೆ ಆತ್ಮಹತ್ಯೆ

ಮೈಸೂರು,ಮಾ.22:- ಪುತ್ರನ ಮೇಲೆ ಕೋಪಗೊಂಡ ತಂದೆಯೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಳವಾಡಿಯಲ್ಲಿ ನಡೆದಿದೆ.

ಮೃತರನ್ನು ಬೆಳವಾಡಿಯ ನಿವಾಸಿ ನರಸೇಗೌಡ (70) ಎಂದು ಗುರುತಿಸಲಾಗಿದೆ. ನರಸೇಗೌಡ ಪತ್ನಿ ಎರಡು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಮೂವರು ಪುತ್ರರಿದ್ದು, ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರಲ್ಲಿ ಓರ್ವ ಪುತ್ರ ವಾಸಿಸುತ್ತಿದ್ದ ಮನೆಯನ್ನು ತನಗೆ ಬಿಟ್ಟು ಕೊಡಬೇಕು. ಅದನ್ನು ಬಾಡಿಗೆಗೆ ನೀಡಿ ತಾನು ಜೀವನ ಸಾಗಿಸುತ್ತೇನೆ ಎಂದು ಕೇಳಿಕೊಂಡಿದ್ದರು. ಆದರೆ ಪುತ್ರ ಒಪ್ಪಿರಲಿಲ್ಲ ಎನ್ನಲಾಗಿದೆ.ಈ ಕುರಿತು ರಾಜೀ ಪಂಚಾಯಿತಿ ಕೂಡ ನಡೆದಿತ್ತು. ಇದರಿಂದ ಬೇಸರಗೊಂಡ ನರಸೇಗೌಡ ಪುತ್ರನಿಗೆ ಸೇರಿದ ಮನೆಯ ಬೀಗ ಮುರಿದು ಒಳನುಗ್ಗಿ ನೇಣು ಹಾಕಿಕೊಂಡು ಶಾತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: