ಪ್ರಮುಖ ಸುದ್ದಿ

ನೈತಿಕ ಮತದಾನಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆ : ಆಟೋ ಓಡಿಸುವ ಮೂಲಕ ಜಾಗೃತಿ ಮೂಡಿಸಿದ ಬಳ್ಳಾರಿ ಜಿಲ್ಲಾಧಿಕಾರಿ

ರಾಜ್ಯ(ಬಳ್ಳಾರಿ)ಮಾ.22:- ಮತದಾನ ಪ್ರಮಾಣ ಹೆಚ್ಚಳ ಹಾಗೂ ನೈತಿಕ ಮತದಾನಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಆಟೋ ಓಡಿಸುವ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಿದರು.

ಮತದಾನದ ಮಹತ್ವ ಸಾರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ 70 ಆಟೋಗಳ ಪೈಕಿ ಆಟೋವೊಂದನ್ನು  ಜಿಲ್ಲಾಧಿಕಾರಿ ಡಾಕ್ಟರ್ ರಾಮಪ್ರಸಾದ್ ಮನೋಹರ್ ಆಟೋ ಓಡಿಸಿ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಿದರು. ನಿಮ್ಮ ಮತ ನಿಮ್ಮ ಹಕ್ಕು ತಪ್ಪದೇ ಮತದಾನ ಮಾಡಿ ಎಂದು ಡಿಸಿ ಮನವಿ ಮಾಡಿದ್ದಾರೆ.

ನಗರದ ಗಡಗಿ ಚನ್ನಪ್ಪ ವೃತ್ತದ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆಟೋ ಓಡಿಸಿದ ಜಿಲ್ಲಾಧಿಕಾರಿಗಳ ಜೊತೆ ಸಿಇಓ ನೀತೀಶ ಹಾಗೂ  ಎಸ್ ಪಿ ಲಕ್ಷಣ ನಿಂಬರಗಿ ಸಾಥ್ ನೀಡಿದ್ದು ವಿಶೇಷವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: