ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರ ದಾಳಿ ನಾಲ್ವರ ಬಂಧನ : ಇಬ್ಬರು ಮಹಿಳೆಯರ ರಕ್ಷಣೆ

ಮೈಸೂರು,ಮಾ.23:- ಮೈಸೂರು ನಗರ ಸಿ.ಸಿ.ಬಿ. ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರು ಖಚಿತ ಮಾಹಿತಿ ಮೇರೆಗೆ ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಹೆಚ್‍ಬಿಸಿಎಸ್ ಲೇಔಟ್‍ನ ಮನೆ ನಂ.09, ಸರ್ವೇ ನಂ.86/8ರ ಮನೆಯ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ  ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು  ನಿತಿನ್ ಬಿನ್ ಬಸವರಾಜು, (20), ಆಲನಹಳ್ಳಿ ಗ್ರಾಮ, ಮೈಸೂರು, ಪವನ್ ಬಿನ್ ಲೇಟ್ ಬಸವರಾಜು, (31) ಟೆರಿಷಿಯನ್ ಕಾಲೇಜ್ ಹತ್ತಿರ,  ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ  ರವಿ ಬಿನ್ ಗಂಗಯ್ಯ, (26) ತುಮಕೂರು ಜಿಲ್ಲೆ, ಶ್ರೀನಿವಾಸ ಬಿನ್ ನಾಗರಾಜು, ಕೃಷ್ಣಪ್ಪ ಗಾರ್ಡನ್, ಬೆಂಗಳೂರು ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಈ ಬಗ್ಗೆ ಆರ್ಥಿಕ & ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಸಮಯದಲ್ಲಿ ಪಶ್ಚಿಮ ಬಂಗಾಳ-01 ಹಾಗೂ ಆಂಧ್ರ ಪ್ರದೇಶದ-01, ಒಟ್ಟು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿರುತ್ತಾರೆ. ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು)  ಮುತ್ತುರಾಜು.ಎಂ. ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ವಿ.ಮರಿಯಪ್ಪ   ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್ ಕೃಷ್ಣಪ್ಪ ಎನ್.ಜಿ, ಎ.ಎಸ್.ಐ ಗಳಾದ ಸುಭಾಷ್ ಚಂದ್ರ ಎಲ್, ರಾಜು, ಮಹಿಳಾ ಎಎಸ್‍ಐ ಆರ್,ನಾಗುಬಾಯಿ, ಸಿಬ್ಬಂದಿಗಳಾದ ಜೋಸೆಫ್ ನರೋನ, ಡಿ.ವಿ ಮುರಳಿಗೌಡ, ಪುನೀತ್ ಹೆಚ್ ಎಸ್, ನರಸಿಂಗರಾವ್, ರಘು.ವಿ, ಪುಷ್ಪಲತಾಬಾಯಿ, ಚಾಲಕರಾದ ಧನಂಜಯ & ರಾಜೇಶ್ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: