ಕರ್ನಾಟಕಪ್ರಮುಖ ಸುದ್ದಿ

ವಾಟ್ಸಪ್‍ನಲ್ಲಿ ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕ ಅಮಾನತು

ತುಮಕೂರು (ಮಾ.23): ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆಯ ಪೋಟೋ ತೆಗೆದು ವಾಟ್ಸಪ್ ಗ್ರೂಪ್‍ನಲ್ಲಿ ಹಾಕಿದ್ದ ಪ್ರಭಾರ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಡಿಡಿಪಿಐ ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ. ಶಿರಾ ತಾಲ್ಲೂಕು ಬದನಕುಂಟೆಯ ಮಣ್ಣಮ್ಮ ಪ್ರೌಢಶಾಲೆಯ ಶಿಕ್ಷಕ ಎಸ್.ಕಾಂತರಾಜು ಅಮಾನತುಗೊಂಡವರು.

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹೊಸೂರು ಪರೀಕ್ಷಾ ಕೇಂದ್ರದ ಪರಿಶೀಲನೆಗೆ ಸಿಟಿಂಗ್ ಸ್ಕ್ವಾಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಕಾಂತರಾಜು ಪರೀಕ್ಷೆ ಆರಂಭವಾಗುತ್ತಿದ್ದಂತೆ ಪ್ರಶ್ನೆ ಪತ್ರಿಕೆಯ ಪೋಟೋ ತೆಗೆದು ವಾಟ್ಸಪ್ ಗ್ರೂಪ್‍ನಲ್ಲಿ ಹಾಕಿದ್ದನು.

ಇದನ್ನು ಗಮನಿಸಿದವರು ಕೆಲ ಶಿಕ್ಷಕರು ತಕ್ಷಣ ಬಿಇಒ ಗಮನಕ್ಕೆ ತಂದಾಗ ಪ್ರಶ್ನೆ ಪತ್ರಿಕೆ ಪೋಟೋವನ್ನು ಡಿಲೀಟ್ ಮಾಡಿಸಿದ್ದರು. ಶಿಕ್ಷಕ ಕಾಂತರಾಜು ಹಾಗೂ ಈತನಿಗೆ ಸಹಕರಿಸಿದ್ದ ಮತ್ತೊಬ್ಬ ಶಿಕ್ಷಕ ಮಂಜುನಾಥ್ ಎಂಬುವರನ್ನು ಅಮಾನತುಗೊಳಿಸಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರವಿಶಂಕರ ರೆಡ್ಡಿ ಆದೇಶಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: