
ಪ್ರಮುಖ ಸುದ್ದಿ
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳಲ್ಲ : ಸಂಸದ ಧೃವನಾರಾಯಣ್ ಸ್ಪಷ್ಟನೆ
ರಾಜ್ಯ(ಚಾಮರಾಜನಗರ)ಮಾ.23:- ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳಲ್ಲ. ನನ್ನ ಗುರುಗಳು ರಾಜಶೇಖರ ಮೂರ್ತಿ ಅವರು ಎಂದು ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಧ್ರುವನಾರಾಯಣ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಇಂದು ಈ ಕುರಿತು ಪ್ರತಿಕ್ರಿಯಿಸಿರುವ ಧ್ರುವನಾರಾಯಣ್, ನಾನು ಮೊದಲ ಬಾರಿಗೆ ಶಾಸಕರಾಗಿದ್ದಾಗ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ನಾನು ಸಂತೆಮರನಹಳ್ಳಿಯಲ್ಲಿ ಗೆದ್ದಾಗ ಅವರು ಜೆಡಿಎಸ್ ನಲ್ಲಿದ್ದರು. ನಾನು ಮೊದಲ ಬಾರಿ ಗೆದ್ದಾಗ ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ನಾಯಕ ನಾನಾಗಿದ್ದೆ. ಅವರು ಪಕ್ಷಕ್ಕೆ ಬಂದಾಗ ಹಿರಿಯ ನಾಯಕರು ಎಂದು ಗೌರವ ಕೊಡುತ್ತಿದ್ದೆ ಅಷ್ಟೇ ಎಂದು ಹೇಳಿದರು.
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಶ್ರೀನಿವಾಸ್ ಪ್ರಸಾದ್ ಅಲ್ಲ. ರಾಜಶೇಖರ್ ಮೂರ್ತಿ ಅವರು ನನ್ನನ್ನ ರಾಜಕೀಯವಾಗಿ ಬೆಳೆಸಿದ್ದು ಅವರೇ ನನ್ನ ಗುರುಗಳು ಎಂದು ಧ್ರುವನಾರಾಯಣ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)