ಪ್ರಮುಖ ಸುದ್ದಿಮೈಸೂರು

ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು ಗುರುಶಿಷ್ಯ ಸಂಬಂಧ ಲೆಕ್ಕಕ್ಕೆ ಬರಲ್ಲ : ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತಿರುಗೇಟು

ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್

ಮೈಸೂರು,ಮಾ.23:- ನಾನು ಮಂಗಳವಾರ ನಾಮಪತ್ರ ಸಲ್ಲಿಸುತ್ತೇನೆ. ಆ ನಂತರ 16 ದಿನ ನಮಗೆ ಪ್ರಚಾರಕ್ಕೆ ಅವಕಾಶ ಸಿಗುತ್ತದೆ. ಇದು ದೊಡ್ಡ ಮಹಾಸಮರ ಚುನಾವಣೆ ಆಗಿದೆ. ನಾವು ಸುಲಭವಾಗಿ ಚುನಾವಣೆಯನ್ನು ತೆಗೆದುಕೊಳ್ಳೋಕೆ ಆಗಲ್ಲ‌ ಎಂದು ಮಾಜಿ ಸಚಿವ ಶ್ರೀನಿವಾಸ್ ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಬಾರಿಯೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ದುರ್ಬಲ ಆಗಿ 8 ಸ್ಥಾನ ಬಿಟ್ಟು ಕೊಟ್ಡಿದ್ದಾರೆ. ಕಾಂಗ್ರೆಸ್‌ನಲ್ಲಿ ಅಸಮಾಧಾನ ಆಗಿ ಮೈತ್ರಿಯಲ್ಲಿ ಅಪಸ್ವರ ಇದೆ. ಕರ್ನಾಟಕ ಬಿಜೆಪಿ ಬಗ್ಗೆ ಜನರಿಗೆ ವಿಶ್ವಾಸ ಇದೆ. 28 ಸ್ಥಾನಗಳಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಡೈರಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇದರಿಂದ ಯಾವುದೇ ಪ್ರಯೋಜನ ಆಗಲ್ಲ‌. ಚುನಾವಣೆ ಸಂದರ್ಭದಲ್ಲಿ ಇಂತವೆಲ್ಲ ಸಹಜ ಆರೋಪ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ನಾವು ಇಂತಹ ಸಾಕಷ್ಟು ಆರೋಪ ಮಾಡಬಹುದು ಆದರೆ ನಮಗೆ ಅದು ಬೇಕಾಗಿಲ್ಲ‌. ಡೈರಿ ಬಿಡುಗಡೆ ವಿಚಾರ ಒಂದು ರಾಜಕೀಯ ಪ್ರೇರಿತ ವಿಚಾರ ಅಷ್ಟೇ, ಇದರಿಂದ ಚುನಾವಣೆಗೆ ಸಮಸ್ಯೆ ಆಗಲ್ಲ ಎಂದರು.

ಗುರು-ಶಿಷ್ಯ ಕುರಿತು ಧ್ರುವನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಗುರು ಶಿಷ್ಯರ ಸಂಬಂಧ ಏನಿದ್ದರೂ ರಾಮಾಯಣ ಮಹಾಭಾರತದಲ್ಲಿ. ಇಲ್ಲೇನಿದ್ದರೂ ಅವರು ಕಾಂಗ್ರೆಸ್ ನಾನು ಬಿಜೆಪಿ ಅಭ್ಯರ್ಥಿ ಅಷ್ಟೇ. ಶಿಷ್ಯ ಅನ್ನೋದೆಲ್ಲ ಈಗ ಉಳಿದಿಲ್ಲ‌.ಪ್ರಜಾಪ್ರಭುತ್ವದಲ್ಲಿ ಜನರೇ ಎಲ್ಲ ತೀರ್ಮಾನ ಮಾಡ್ತಾರೆ. ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅವರು ಬೇರೆ ಪಕ್ಷ ನಾನು ಬೇರೆ ಪಕ್ಷ. ಇಲ್ಲಿ ಗುರು ಶಿಷ್ಯ ಸಂಬಂಧ ಲೆಕ್ಕಕ್ಕೆ ಬರಲ್ಲ‌ ಎನ್ನುವ ಮೂಲಕ ಶ್ರೀನಿವಾಸ ಪ್ರಸಾದ್ ನನ್ನ ರಾಜಕೀಯ ಗುರು ಅಲ್ಲ ಅನ್ನೋ ಸಂಸದ ಆರ್.ಧೃವನಾರಾಯಣ್  ಹೇಳಿಕೆಗೆ   ತಿರುಗೇಟು ನೀಡಿದರು.

ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ವಿಚಾರ ನಮ್ಮ ಕೈಯಲ್ಲಿ ಇಲ್ಲ. ಇದು ಮೋದಿ ಅಮಿತ್ ಷಾ ಗಮನಕ್ಕೆ ಬಂದಿದೆ. ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಅವರದ್ದೇ ಅಂತಿಮ ತೀರ್ಮಾನ. ಮಂಡ್ಯದಲ್ಲಿ ಪರಿಸ್ಥಿತಿ ಬೇರೆ ಇದೆ. ಸುಮಲತಾ ಸ್ಪರ್ಧೆ ಮಾಡಿದ್ದಾರೆ. ಅಲ್ಲಿ ಬೆಂಬಲ ಕೊಡಬೇಕೋ ಬೇಡವೋ ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಅಲ್ಲಿನ ಕಾಂಗ್ರೆಸ್ ಪರಿಸ್ಥಿತಿ ಕೆಟ್ಟದಾಗಿದೆ. ಕಾರ್ಯಕರ್ತರನ್ನು ಸಸ್ಪೆಂಡ್ ಮಾಡುತ್ತಿದ್ದಾರೆ. ಇವೆಲ್ಲನ್ನು ಯೋಚನೆ ಮಾಡಿ ನಮ್ಮ ನಾಯಕರು ನಿರ್ಧಾರ ಮಾಡ್ತಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: