ಮನರಂಜನೆ

ತಮಿಳು, ತೆಲುಗಿನಲ್ಲಿ ಮೂಡಿಬರಲಿದೆ `ಕಾಲೇಜ್ ಕುಮಾರ್’

ಬೆಂಗಳೂರು,ಮಾ.23-ಕನ್ನಡದ `ಕಾಲೇಜ್ ಕುಮಾರ್’ ಸಿನಿಮಾ ತೆಲುಗು ಮತ್ತು ತಮಿಳಿಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಿದ ಸಂತು ತೆಲುಗು ಮತ್ತು ತಮಿಳಿನಲ್ಲೂ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ದಕ್ಷಿಣ ಭಾರತದ ಫೇಮಸ್‌ ಫೈಟ್‌ ಮಾಸ್ಟರ್‌ ವಿಜಯ್‌ ಅವರ ಪುತ್ರ ರಾಹುಲ್‌ ವಿಜಯ್‌ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ವಿಜಯ್‌ ಇನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸ್ಟಂಟ್‌ ಮಾಸ್ಟರ್‌ ಆಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲೂ ಅವರು ಬಹುತೇಕ ಸ್ಟಾರ್‌ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಈಗ ಅವರು ಮಗ ನನ್ನ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ರಾಹುಲ್‌ ಪ್ರತಿಭಾವಂತ ನಟ. ಅವರು ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುತ್ತಾರೆ ನಿರ್ದೇಶಕ ಸಂತು.

ತಮಿಳು ಮತ್ತು ತೆಲುಗಿನಲ್ಲಿ ಹೆಸರು ಮಾಡಿರುವ ನಾಯಕಿಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಿದ್ದೇವೆ. ಈಗಾಗಲೇ ಇಬ್ಬರು ನಾಯಕಿಯರ ಆಯ್ಕೆ ಆಗಿದೆ. ಅಂತಿಮವಾಗಿ ಯಾರು ನಾಯಕಿಯ ಪಾತ್ರವನ್ನು ಮಾಡುತ್ತಾರೆ ಎನ್ನುವುದನ್ನು ಇನ್ನೆರಡು ವಾರಗಳಲ್ಲಿ ಗೊತ್ತಾಗಲಿದೆ.

ನಿರ್ದೇಶಕ ಸಂತು ಸದ್ಯ ಬಿಚ್ಚುಗತ್ತಿ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಕಾಲೇಜ್‌ ಕುಮಾರ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: