ಮೈಸೂರು

 ಮಾ.27:  ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗೋತ್ಸವ-2019

ಮೈಸೂರು,ಮಾ.23:- 27/03/2019 ರಂದು ಸಂಜೆ 6 ಗಂಟೆಗೆ, ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗೋತ್ಸವ 2019 ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ.ಕಾಳೇಗೌಡ ನಾಗವಾರ, ಚಿಂತಕರು ಹಾಗೂ ಮಾಜಿ ಅಧ್ಯಕ್ಷರು, ಜನಪದ ಅಕಾಡೆಮಿ, ಬೆಂಗಳೂರು ಇವರು ನಡೆಸಿಕೊಡುವರು. ವಿಶ್ವರಂಗಭೂಮಿ ಸಂದೇಶವನ್ನು  ಶೀಲಕುಮಾರಿ, ಉಪನ್ಯಾಸಕರು, ಮಹಾರಾಣಿ ಕಾಲೇಜು ಇವರು ವಾಚಿಸಲಿದ್ದಾರೆ. ಅತಿಥಿಗಳಾಗಿ ಎಚ್.ಚನ್ನಪ್ಪ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷರಾದ   ಹೆಚ್.ಎಸ್.ಸುರೇಶ್‍ಬಾಬು ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರೊ.ಚ.ಸರ್ವಮಂಗಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,   ಗಂಗಾಧರಸ್ವಾಮಿ, ಜೀವಮಾನದ ಶ್ರೇಷ್ಠ ಗೌರವ ಪ್ರಶಸ್ತಿ, ನಾಟಕ ಅಕಾಡೆಮಿ ಪುರಸ್ಕೃತರು ಮತ್ತು   ಮೈಮ್ ರಮೇಶ್, ನಾಟಕ ಅಕಾಡೆಮಿ ಪುರಸ್ಕೃತರು ಇವರುಗಳನ್ನು ಸನ್ಮಾನಿಸಲಾಗುವುದು.

27/03/2019 ರಿಂದ 29/03/2019 ರವರೆಗೆ ರಂಗೋತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ 7 ಗಂಟೆಗೆ, ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿದೆ.   27-03-209 ರಂದು ರಂಗಾಯಣ, ಮೈಸೂರು ಇವರು ರಂಗಾಯಣದ ನಿರ್ದೇಶಕಿಯಾದ ಭಾಗೀರಥಿ ಭಾಯಿ ಕದಂ ಅವರ ನಿರ್ದೇಶನದ “ಯಹೂದೀ ಹುಡುಗಿ” ನಾಟಕ ಪ್ರದರ್ಶನ ನೀಡಲಿದ್ದಾರೆ.   28/03/2019 ರಂದು ನಟನ, ಮೈಸೂರು ಇವರು ಡಾ.ಶ್ರೀಪಾದ್ ಭಟ್ ನಿರ್ದೇಶನದ “ಉಷಾಹರಣ” ನಾಟಕ ಪ್ರದರ್ಶಿಸಲಿದ್ದಾರೆ. 29/03/2019 ರಂದು ಚಿತ್ತಾರ, ಬೆಂಗಳೂರು ಇವರು ರಾಜೇಂದ್ರ ಕಾರಂತ್ ರಚಿಸಿ ನಿರ್ದೇಶೀಸಿದ “ಸುಮ್ಮನೆ” ನಾಟಕದ ಪ್ರದರ್ಶನವಿರಲಿದೆ. (ಎಸ್.ಎಚ್)

Leave a Reply

comments

Related Articles

error: