ಪ್ರಮುಖ ಸುದ್ದಿಮೈಸೂರು

ಕರಾಟೆ ಮಾಸ್ಟರ್ ಸತೀಶ್ ರಾಜು ಅವರಿಗೆ ಗೌರವ ಡಾಕ್ಟರೇಟ್ : ಅಭಿನಂದನೆ

ಮೈಸೂರು,ಮಾ.23 : ನಗರದ ಒಕಿನವ ಸ್ಕೂಲ್ ಆಫ್ ಕರಾಟೆ ಸಂಸ್ಥಾಪಕ ಹಾಗೂ ಗ್ರಾಂಡ್ ಮಾಸ್ಟರ್ ಆರ್.ಸತೀಶ್ ರಾಜು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ನ್ಯಾಷನಲ್ ವರ್ಚುಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿರುವುದು ಅವರ ಸೇವೆಗೆ ಸಂದ ಗೌರವ ಎಂದು ಸಂಸ್ಥೆ ಅಧ್ಯಕ್ಷ ಡಾ.ಪ್ರವೀಣ್ ರಂಗ ಅಭಿನಂದಿಸಿದರು.

ಪತ್ರಕರ್ತರ ಭವನದಲ್ಲಿ  ಅವರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಲಾಯಿತು.

ನಂತರ ಕರಾಟೆ ಮಾಸ್ಟರ್ ಡಾ.ನಂಜುಂಡಸ್ವಾಮಿ ಮಾತನಾಡಿ, ಕರಾಟೆ ಕ್ಷೇತ್ರದಲ್ಲಿ ಕಳೆದ 42 ವರ್ಷಗಳಿಂದ ಅನುಭವಿ ತರಬೇತಿದಾರರಾಗಿದ್ದು, ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಹಿರಿಯ ಬ್ಲಾಕ್ ಬೆಲ್ಟ್ ಕರಾಟೆ ಮಾಸ್ಟರ್ ಗಳಿಗೆ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಗಳಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡುತ್ತಿದ್ದಾರೆ, ಇದರೊಂದಿಗೆ ಸಂಸ್ಥೆ ವತಿಯಿಂದ ನೂರಾರು ಶಿಷ್ಯರ ಹುಟ್ಟಿಗೆ ಕಾರಣಕರ್ತರಾಗಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ, ಪ್ರಸಕ್ತ ರಾಜಮನೆತನದವರಿಗೆ ಅಂಗರಕ್ಷಕ ಹಾಗೂ ರೆಸಿಡೆನ್ಸಿಯಲ್ ವಿಂಗ್ ಉಸ್ತುವಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ಇವರ ಹೆಗ್ಗಳಿಕೆ ಎಂದರು.

ಇದರೊಂದಿಗೆ ಲಯನ್ಸ್, ರಾಜಕ್ಷತ್ರಿಯ ಮಹಾಮಂಡಳಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಡಾಕ್ಟರೇಟ್ ಪದವಿ ಸಂದಿರುವುದನ್ನು ಶ್ಲಾಘಿಸಿದರು.

ವಿ.ಶಶಿಕಲಾ, ವೆಂಕಟೇಶ್, ಪುಟ್ಟರಾಜು ಚಿನ್ನಕೃಷ್ಣ ರಾಜ್ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: