ಪ್ರಮುಖ ಸುದ್ದಿಮೈಸೂರು

ಕೆಪಿ ಪಕ್ಷದ ಅಭ್ಯರ್ಥಿಯಾಗಿ ನಿವೃತ್ತ ಮಾಜಿ ಸೈನಿಕ ಬಿದ್ದಪ್ಪ ನಾಮಪತ್ರ.26.

ಮೈಸೂರು,ಮಾ.23 : ಕರ್ನಾಟಕ ಪ್ರಜಾ ಪಾರ್ಟಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿವೃತ್ತ ಸೈನಿಕ ಪಿ.ಕೆ. ಬಿದ್ದಪ್ಪ ಅವರು ಮಾ.26ರಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಣ್ನ ತಿಳಿಸಿದರು.

ಇಂದು ಪತ್ರಕರ್ತರ ಭವನದಲ್ಲಿ ಚುನಾವಣಾ ಚಿನ್ಹೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಸಮಾನತೆ, ಮಹಿಳಾ ಮೀಸಲಾತಿ ಒತ್ತು ನೀಡಬೇಕೆಂಬುದೇ ಪಕ್ಷದ ಧ್ಯೇಯೋದ್ದೇಶವೆಂದು ತಿಳಿಸಿದರು. ಲಂಚ, ಗುಡಿಸಲು ಮುಕ್ತ ಸಮಾಜ ನಿರ್ಮಾಣ, ನಿರುದ್ಯೋಗ, ಕಾರ್ಮಿಕ ಸಮಸ್ಯೆ ನಿರ್ಮೂಲನೆ, ಹಿಂದುಳಿದ, ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿ,  ರೈತ ಸಾಲ ಮನ್ನಾ ಮುಂತಾದ  ಸಾಮಾಜಿಕ ಕಳಕಳಿಯನ್ನು ಪಕ್ಷವು ಹೊಂದಿದ್ದು, ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದರು.

ಘೋಷಿತ ಅಭ್ಯರ್ಥಿ ಪಿ.ಕೆ.ಬಿದ್ದಪ್ಪ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಕಾರ್ತಿಕ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಬಾರ್ಬರ ಬೇಯರ್, ಬಿ.ಆದರ್ಶ, ರಾಮಚಂದ್ರ ರಾವ್, ಇನ್ನಿತರ ಬೆಂಬಲಿಗರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: