ಮೈಸೂರು

ಆಹಾರ ಅರಸಿ ಬಂದ ಆನೆ ಸಾವು

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಂತಹ ಗಂಡಾನೆಯೊಂದು ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ಹಾದನೂರು ಒಡೆಯನಪುರದ ರಮೇಶ್ ಎಂಬವರ ಜಮೀನಿನಗೆ ಆಹಾರವನ್ನು ಅರಸಿ ಬಂದ ಗಂಡಾನೆ  ವಿದ್ಯುತ್ ಸ್ಪರ್ಶದಿಂದಾಗಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಹೆಡಿಯಾಲ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎಚ್.ಡಿ.ಕೋಟೆ ನಂಜನಗೂಡು ಎಚ್.ಡಿ.ಕೋಟೆ ಗಡಿ ಭಾಗದಲ್ಲಿ ರಮೇಶ್ ಅವರ ಜಮೀನಿದ್ದು, ಬಹುಶ: ಜಮೀನಿನಲ್ಲಿ ಅಳವಡಿಸಲಾದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರಬೇಕು ಎನ್ನಲಾಗುತ್ತಿದೆ.

Leave a Reply

comments

Related Articles

error: