ಮೈಸೂರು

ನೃತ್ಯೋಪಾಸನಕ್ಕೆ ಚಾಲನೆ

ಕಲಾ ಸಂದೇಶ ಪ್ರತಿಷ್ಠಾನ ವತಿಯಿಂದ ನಡೆಯುವ  ಮೂರು ದಿನಗಳ ಹಬ್ಬ ನೃತ್ಯೋಪಾಸನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಮೈಸೂರಿನ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಉದ್ಯಮಿ ಕೆ.ವಿ.ಮೂರ್ತಿ ನೃತ್ಯೋಪಾಸನಕ್ಕೆ ಚಾಲನೆ ನೀಡಿದರು.  ಈ ಸಂದರ್ಭ ತಿ.ನರಸೀಪುರದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಸಿ.ಜಿ. ಉಷಾದೇವಿ ಹಾಗೂ ಮೈಸೂರಿನ ಖ್ಯಾತ ಭರತನಾಟ್ಯ ಕಲಾವಿದೆ ಮಿತ್ರಾ ನವೀನ್, ಪ್ರತಿಷ್ಠಾನದ ಅಧ್ಯಕ್ಷ ಡಾ. ಡಿ ಉಮಾಪತಿ ಉಪಸ್ಥಿತರಿದ್ದರು.

ಅನುಷಾ ಜಿ.ಎಮ್ ಹಾಗೂ ಅಕ್ಷತಾ ವೈ.ಅಡಿಗ  ಭರತನಾಟ್ಯ ಪ್ರದರ್ಶನ ನೀಡಿದರು. ನಟುವಾಂಗದಲ್ಲಿ ವಿದ್ವಾನ್ ಸಂದೇಶ. ಕೇ. ಭಾರ್ಗವ್, ಹಾಡುಗಾರಿಕೆಯಲ್ಲಿ ರಾಮಾ. ಪೀ, ಪೀಟಿಲಿನಲ್ಲಿ ನಾರಾಯಣ್, ಮೃದಂಗದಲ್ಲಿ ಜಿ.ಟಿ. ಸ್ವಾಮಿ, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ ಸಾಥ್ ನೀಡಿದರು.

ನೃತ್ಯೋಪಾಸನವು 27 ಹಾಗೂ 28 ರಂದು ಜರುಗಲಿದ್ದು, 27 ರಂದು ಮೈಸೂರಿನ ಕಲಾಮಂದಿರದಲ್ಲಿ, 28 ರಂದು ಮೈಸೂರಿನ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ  ನಡೆಯಲಿದೆ.

Leave a Reply

comments

Related Articles

error: