ಪ್ರಮುಖ ಸುದ್ದಿ

ಮತದಾನ ಜಾಗೃತಿ : ಮೇಣದ ಬತ್ತಿ ಬೆಳಕಿನ ಮೆರವಣಿಗೆ

ರಾಜ್ಯ(ಮಡಿಕೇರಿ) ಮಾ.23 :- ಮತದಾನದ ಮಹತ್ವ ಕುರಿತು ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಂದ ಮೇಣದ ಬತ್ತಿ ಬೆಳಕಿನ ಮೆರವಣಿಗೆ ಜಾಗೃತಿ ಅಭಿಯಾನ  ನಡೆಯಿತು.

ನಗರದ ಬಾಲಭವನದಿಂದ ಹೊರಟ ಮೆರವಣಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಕಾಲೇಜು ರಸ್ತೆ, ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಬಾಲಭವನ ತಲುಪಿತು.

ಮತದಾನದ ಕುರಿತು ಜಾಗೃತಿ ಮೆರವಣಿಗೆಯಲ್ಲಿ ಹಿರಿಯ ನಾಗರಿಕರು ಉತ್ಸ್ಸಾಹದಿಂದ ಪಾಲ್ಗೊಂಡಿದ್ದರು. ಮತದಾನ ಮಾಡಿ ಪ್ರಜಾಪ್ರಭುತ್ವ ಬಲಪಡಿಸಿ, ಮತದಾನ ಮಾಡಿದವರೇ ಶೂರರು, ನಿಮ್ಮ ಮತ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಮತದಾನ ಮಾಡುವ ಮೂಲಕ ಹೆಮ್ಮೆಯಿಂದ ಗುರ್ತಿಸಿಕೊಳ್ಳಿ ಎಂಬ ಘೋಷ ವಾಕ್ಯಗಳು ಮೊಳಗಿದವು.

ಮೇಣದ ಭತ್ತಿ ಬೆಳಕಿನ ಮೆರವಣಿಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ತಾ.ಪಂ.ಇಒ ಲಕ್ಷ್ಮಿ ಅವರು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾನ ಮಾಡುವಂತಾಗಬೇಕು ಎಂದು ಅವರು ಕೋರಿದರು. ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ದೇವರಾಜು ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: