ಕರ್ನಾಟಕ

ಬ್ರಿಗೇಡ್ ಮೂಲಕ ಮೋದಿ ಕೈ ಬಲಪಡಿಸುತ್ತೇನೆ: ಈಶ್ವರಪ್ಪ

ಕೂಡಲಸಂಗಮ: ರಾಯಣ್ಣ ಬ್ರಿಗೇಡ್ ಯಾರ ವಿರುದ್ಧವೂ ಅಲ್ಲ, ದಲಿತರು, ಹಿಂದುಳಿದವರನ್ನು ಬ್ರಿಗೇಡ್ ಸಂಘಟನೆ ನೆರಳಲ್ಲಿ ಒಂದುಗೂಡಿಸುವುದರ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸಲಾಗುವುದು ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಯಡಿಯೂರಪ್ಪಗೆ ಪರೋಕ್ಷ ಸಂದೇಶ:

ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮೈದಾನದಲ್ಲಿ “ರಾಯಣ್ಣ ಬಲಿದಾನ ದಿವಸ”ದ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಶ್ರೀಕೃಷ್ಣ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಕಂಸನಿಗೆ ಹೆದರಿಕೆ ಹುಟ್ಟಿಸಿದ್ದ. ಅಂತೆಯೇ ಬ್ರಿಗೇಡ್ ಸಂಘಟನೆ ಹುಟ್ಟುಹಾಕಿದ ಆರು ತಿಂಗಳೊಳಗೆ ಕೆಲವರಿಗೆ ನಡುಕ ಉಂಟಾಗಿದೆ. ಕಂಸನನನ್ನು ಶ್ರೀ ಕೃಷ್ಣ ಕೊಂದುಹಾಕಿದ. ಆದರೆ ಬ್ರಿಗೇಡ್ ಸಂಘಟನೆ ಯಾರನ್ನೋ ಕೊಲ್ಲಲು ಅಲ್ಲ, ಬದಲಾಗಿ ಮನಃಪರಿವರ್ತನೆಗಾಗಿ ಅಷ್ಟೆ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕುಟುಕಿದರು.

ಮೋದಿಗೆ ಆಹ್ವಾನ:

“ಬ್ರಿಗೇಡ್ನ ಮುಂದಿನ ಸಮಾವೇಶ ಉದ್ಘಾಟನೆಗೆ ಮೋದಿ ಅವರನ್ನು ಕರೆಯಲಾಗುವುದು” ಎಂದ ಅವರು, ರಾಯಣ್ಣ ಬ್ರಿಗೇಡ್ ಸಂಘಟನೆಗೆ ಬಿಜೆಪಿ ಹೈಕಮಾಂಡ್ ಬೆಂಬಲ ಇದೆ ಎನ್ನುವ ಸೂಕ್ಷ್ಮತೆಯನ್ನು ಹೊರಹಾಕಿದರು.

Leave a Reply

comments

Related Articles

error: