ಸುದ್ದಿ ಸಂಕ್ಷಿಪ್ತ

ಕಾದಂಬರಿ ಬಿಡುಗಡೆ : ಸಂವಾದ ನಾಳೆ

ಮೈಸೂರು,ಮಾ.25 : ಹಾಸನದ ರುಚಿರ ಪ್ರಕಾಶನ ವತಿಯಿಂದ ಡಾ.ಹೆಬ್ಬಾಲೆ ಕೆ.ನಾಗೇಶ್ ಅವರ ‘ಅಗ್ರಹಾರ’ ಕಾದಂಬರಿ ಬಿಡುಗಡೆ ಮತ್ತು ಸಂವಾದವನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸುವರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಉಪನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಪುಸ್ತಕ ಬಿಡುಗಡೆಗೊಳಿಸುವರು, ವಿಮರ್ಶಕ ಪ್ರೊ.ಸಿ.ನಾಗಣ್ಣ ಪುಸ್ತಕ ಕುರಿತು ಮಾತನಾಡುವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: