ಮೈಸೂರು

ತೇರಾಪಂಥ್ ವತಿಯಿಂದ ರಿಕ್ಷಾ ಚಾಲಕರಿಗೆ ಆರೋಗ್ಯ ತಪಾಸಣೆ

ಮೈಸೂರಿನ  ತೇರಾಪಂಥ್ ಯುವ ಪರಿಷದ್ ಹಾಗೂ ತೇರಾಪಂಥ್ ಕಿಶೋರ್ ಮಂಡಲ ವತಿಯಿಂದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ರಿಕ್ಷಾ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ವಿಮೆ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ತೇರಾಪಂಥ್ ಭವನದಲ್ಲಿ ಕೆ.ಆರ್.ಸಂಚಾರಿ ಠಾಣೆಯ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಒಂದು ಸಾವಿರ ರಿಕ್ಷಾ ಚಾಲಕರಿಗೆ ಜೆ.ಎಸ್.ಎಸ್.ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಿಸಿದರಲ್ಲದೇ ಒಟ್ಟು ಎರಡೂವರೆ ಲಕ್ಷ ರೂ.ಗಳ ವಿಮೆಯನ್ನು ಮಾಡಿಸಿದರು.

ಈ ಸಂದರ್ಭ ಮಾತನಾಡಿದ ರಿಕ್ಷಾ ಚಾಲಕರು ಮಾತನಾಡಿ ಆಟೋರಿಕ್ಷಾ ಚಾಲಕರನ್ನು ಗುರುತಿಸಿ ಈ ರೀತಿ ಸೇವೆ ನೀಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಮದ್ಯಪಾನ ಮಾಡದೇ ನಿಧಾನವಾಗಿ ಚಲಿಸಿ, ರಿಕ್ಷಾವನ್ನು ವೇಗವಾಗಿ ಓಡಿಸದಿರಿ ಎಂದು ಹೇಳುವ ಮೂಲಕ ನಮ್ಮಲ್ಲಿ ಜಾಗೃತಿ ಮೂಡುಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೆ.ಆರ್.ಸಂಚಾರಿ ಠಾಣೆಯ ಎಎಸ್ಐ ರಮೇಶ್, ವಿಜಯಕುಮಾರ್, ಸೇರಿದಂತೆ ವೈದ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: