ಕ್ರೀಡೆಪ್ರಮುಖ ಸುದ್ದಿ

ಆರು ಭಾಷೆಗಳಲ್ಲಿ ಕುಶಲ ವಿಚಾರಿಸಿದ ತಂದೆಗೆ ಆರೂ ಭಾಷೆಗಳಲ್ಲಿಯೂ ಮುದ್ದುಮುದ್ದಾಗಿ ಉತ್ತರಿಸಿದ ಕ್ರಿಕೆಟಿಗ ಧೋನಿ ಪುತ್ರಿ!

 ದೇಶ(ನವದೆಹಲಿ)ಮಾ.25:- ಇಂಡಿಯನ್ ಪ್ರೀಮಿಯರ್ ಲೀಗ್ ನ  ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಯನ್ನು 7ವಿಕೆಟ್ ಗಳಿಂದ ಮಣಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಕುಟುಂಬಿಕರೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಐಪಿಎಲ್ ನ ಬಿಡುವಿನ ವೇಳಾ ಪಟ್ಟಿಯ ನಡುವೆ ತನ್ನ ಪತ್ನಿ ಸಾಕ್ಷಿ ಮತ್ತು ಮಗಳು ಜೀವಾಳೊಂದಿಗೆ ಸಮಯ ಕಳೆಯುತ್ತಿರುವ ಧೋನಿ ಮಗಳಿಗೆ ಆರು ಭಾಷೆಗಳಲ್ಲಿ ಕುಶಲ ವಿಚಾರಿಸಿದ್ದಾರಂತೆ. ತಮಿಳು, ಬಂಗಾಳಿ, ಗುಜರಾತಿ, ಭೋಜಪುರಿ, ಪಂಜಾಬಿ ಮತ್ತು ಉರ್ದುವಿನಲ್ಲಿ ಕುಶಲ ವಿಚಾರಿಸಿದ್ದು, ಅವರ ಮಗಳು ಜೀವಾ ಕೂಡ ಅಷ್ಟೇ ಮುದ್ದುಮುದ್ದಾಗಿ ಆರು ಭಾಷೆಯಲ್ಲಿಯೂ ಉತ್ತರ ನೀಡಿದ್ದಾಳಂತೆ. ‘ಎಪ್ಪಡಿ ಇರುಕೇನಗ’ ಎಂದು ಕೇಳಿದಾಗ ‘ನಲ್ಲ ಇರುಕೇಂ’ ಎಂದಿದ್ದು, ಇದರ ನಂತರ ಪಂಜಾಬಿಯಲ್ಲಿ ‘ಕಿದ್ದಾ’ ಎಂದಾಗ ‘ವಧಿಯಾ’ ಎಂದುತ್ತರಿಸಿದ್ದಾಳೆ. ಭೋಜಪುರಿಯಲ್ಲಿ ‘ಕೈಸನ್ ಬಾ’ ಎಂದಾಗ ‘ಠಿಕೋ ಬಾ’ ಎಂದಿದ್ದಾಳೆ. ಇದರ ಜೊತೆ ಇತರ ಬೇರೆ ಬೇರೆ ಭಾಷೆಗಳಲ್ಲಿಯೂ ಕೇಳಿದಾಗ ಅದಕ್ಕೂ ಮುದ್ದುಮುದ್ದಾಗಿಯೇ ಉತ್ತರಿಸಿದ್ದಾಳೆ. ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದು, ಸಾಕಷ್ಟು ಶೇರ್ ಆಗುವ ಜೊತೆಗೆ ಲಕ್ಷಗಟ್ಟಲೇ ಮಂದಿ ವೀಕ್ಷಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: