ದೇಶ

`ಪಿಎಂ ನರೇಂದ್ರ ಮೋದಿ’ ಚಿತ್ರ ನಿರ್ಮಾಪಕರಿಗೆ ಚುನಾವಣಾ ಆಯೋಗದ ನೋಟಿಸ್

ನವದೆಹಲಿ,ಮಾ.26-ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆ ಆಧಾರಿತ ಚಲನಚಿತ್ರ `ಪಿಎಂ ನರೇಂದ್ರ ಮೋದಿ’ ನಿರ್ಮಾಪಕರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಚಿತ್ರ ಮಾದರಿ ನೀತಿಸಂಹಿತೆ ಉಲ್ಲಂಘಿಸಿದೆ ಎಂಬ ಹಿನ್ನೆಲೆಯಲ್ಲಿ ದಿಲ್ಲಿಯ ಮುಖ್ಯ ಚುನಾವಣಾ ಕಚೇರಿ ನೋಟಿಸ್ ನೀಡಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಪೂರ್ವ ದಿಲ್ಲಿಯ ಚುನಾವಣಾ ಅಧಿಕಾರಿ ಕೆ.ಮಹೇಶ್, `ಪಿಎಂ ನರೇಂದ್ರ ಮೋದಿಚಿತ್ರದ ನಿರ್ಮಾಣ ಸಂಸ್ಥೆ ಮತ್ತು ಸಂಗೀತ ನೀಡಿದ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ. ಚಿತ್ರದ ಬಗೆಗಿನ ಜಾಹೀರಾತು ಪ್ರಕಟಿಸಿದ ಎರಡು ಪ್ರಮುಖ ಪತ್ರಿಕೆಗಳಿಗೂ ನೋಟಿಸ್ ನೀಡಲಾಗಿದೆ.

ಸಂಬಂಧಪಟ್ಟವರು ನೋಟಿಸ್ಗೆ ಉತ್ತರಿಸಲು ಮಾರ್ಚ್ 30ರವರೆಗೂ ಕಾಲಾವಕಾಶ ನೀಡಲಾಗಿದೆ ಎಂದು ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಮಾಜ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾದಲ್ಲಿ, ಅದಕ್ಕೆ ಮಾಧ್ಯಮ ಪ್ರಮಾಣಪತ್ರ ಮತ್ತು ಕಣ್ಗಾವಲು ಸಮಿತಿಯ ಪ್ರಮಾಣಪತ್ರ ಅಗತ್ಯ ಎಂದು ಅವರು ಹೇಳಿದ್ದಾರೆ.

ಏ. 5ರಂದು ಬಿಡುಗಡೆಗೆ ಸಿದ್ಧವಾಗಿರುವ `ಪಿಎಂ ನರೇಂದ್ರ ಮೋದಿ’ ಚಿತ್ರದಲ್ಲಿ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅಭಿನಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: