ಕರ್ನಾಟಕಮನರಂಜನೆ

28 ಮಕ್ಕಳನ್ನು ದತ್ತು ಪಡೆದ ಬಿಗ್ ಬಾಸ್ ಖ್ಯಾತಿಯ ಶಶಿ ಕುಮಾರ್

ಬೆಂಗಳೂರು,ಮಾ.26-ಬಿಗ್ ಬಾಸ್ 6 ರಿಯಾಲಿಟಿ ಶೋ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ ಆಧುನಿಕ ರೈತ ಶಶಿ ಕುಮಾರ್ ಎಲ್ಲರೂ ಮೆಚ್ಚುವಂತಹ ಕೆಲಸವೊಂದನ್ನು ಮಾಡಿದ್ದಾರೆ.

ಶಶಿ ಶಾಲೆಯೊಂದರ ಮಕ್ಕಳನ್ನು ದತ್ತು ಪಡೆದಿದ್ದಾರೆ. ಆ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಶಶಿ ಹೊತ್ತುಕೊಂಡಿದ್ದಾರೆ.

ಶಶಿ ಸ್ವಂತ ಊರಾದ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯ 28 ಮಕ್ಕಳನ್ನು ದತ್ತು ಪಡೆದಿದ್ದಾರೆ. ವಿಶೇಷ ಅಂದರೆ ಇದು ಶಶಿ ಓದಿ ಆಡಿ ಬೆಳೆದಿರುವ ಶಾಲೆಯಾಗಿದೆ. ಹಾಗಾಗಿ ಮತ್ತಷ್ಟು ಕಾಳಜಿಯಿಂದ ಈ ಶಾಲೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಶಾಲೆಯ ಋಣ ತೀರಿಸುತ್ತಿದ್ದಾರೆ.

ವಿಧ್ಯಾಭ್ಯಾಸ, ಯೂನಿಫಾರ್ಮ್ ಸೇರಿದಂತೆ ಮಕ್ಕಳ ಶಾಲಾ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಶಶಿ ವಹಿಸಿಕೊಂಡಿದ್ದಾರೆ. ಸದ್ಯ 28 ಮಕ್ಕಳನ್ನು ದತ್ತು ಪಡೆದಿರುವ ಶಶಿ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಶಶಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಶಶಿ ‘ಬಿಗ್ ಬಾಸ್ ಸೀಸನ್ 6′ ರ ವಿಜೇತ. ಇವರು ಬಿಗ್ ಬಾಸ್ ಗೆ ಬರುವ ಮುನ್ನವೇ ಅಭಿನಯಿಸಿದ್ದ ಕಲ್ಯಾಣ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸದ್ಯ ಎರಡನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಶಶಿ ಸಿನಿಮಾ ಜೊತೆಗೆ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ಇದರ ನಡುವೆ ಈಗ ಹೊಸ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಮತ್ತಷ್ಟು ಬ್ಯುಸಿಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: