ಮೈಸೂರು

ಮಾದಿಗರ ಜನಜಾಗೃತಿ ಸಮಾವೇಶ; ಫೆ.1ರಂದು

ಮಾದಿಗ ಸಂಘಟನೆಗಳ ಒಕ್ಕೂಟವು ಸಾಮಾಜಿಕ ನ್ಯಾಯಕ್ಕಾಗಿ ಜನಜಾಗೃತಿ ಸಮಾವೇಶವನ್ನು ಫೆ.1ರಂದು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ ಎಂದು ಮಾದಿಗ ಸಮಾಜದ ಹೋರಾಟಗಾರ ಕೆ.ಪ್ರಸನ್ನ ಚಕ್ರವರ್ತಿ ಅವರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದಲ್ಲಿ ಸಚಿವರಾದ ಹೆಚ್.ಆಂಜನೇಯ, ತನ್ವೀರ್ ಸೇಠ್, ಮಾಜಿ ಸಂಸದ ಹೆಚ್.ವಿಶ್ವನಾಥ್, ಶಾಸಕ ವಾಸು, ಮಾಜಿ ಸಚಿವರಾದ ಅಲ್ಕೋಡ್ ಹನುಮಂತಪ್ಪ, ಎ.ನಾರಾಯಣಸ್ವಾಮಿ, ಕೋಟೆ ಎಂ.ಶಿವಣ್ಣ, ಹಾಗೂ ಇತರರು ಉಪಸ್ಥಿತರಿರುವರು. ಚಿತ್ರದುರ್ಗದ ಶ್ರೀಮಾದಾರ ಚನ್ನಯ್ಯ ಮಹಾಸಂಸ್ಥಾನದ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ತಿಳಿಸಿದರು.

ಅಂದು ಬೆಳಿಗ್ಗೆ 9ರಿಂದ ಕೋಟೆ ಆಂಜನೇಯ ದೇವಸ್ಥಾನದಿಂದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯುವುದು. ಉಪಜಾತಿಗಳಿಗೆ ಸರ್ಕಾರ ನೀಡಿರುವ ಸವಲತ್ತುಗಳು ಎಲ್ಲರಿಗೂ ಲಭ್ಯವಿಲ್ಲ. ಸಮುದಾಯದ ಹೋರಾಟಗಳಿಗೆ ಸರ್ಕಾರಿದಂದ ಬೆಂಬಲವಿಲ್ಲ. ಮಾದಿಗರಿಗೆ ನಾಲ್ಕು ಮೀಸಲಾತಿ ಕ್ಷೇತ್ರಗಳಿದ್ದರೂ ಸೂಕ್ತ ಅಭ್ಯರ್ಥಿಗಳಿಲ್ಲದೆ ರಾಜಕೀಯದಲ್ಲಿಯೂ ಹಿನ್ನೆಡೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಜನಾಂಗವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ಇಲ್ಲವೆಂದ ಅವರು, ಎಷ್ಟು ದಿನ ನಾವು ಚರಂಡಿ ಬಳಿದು, ಚಪ್ಪಲಿ ಹೊಲಿದು, ಕಸಗುಡಿಸಿಕೊಂಡು ಬದುಕಬೇಕು? ನಮ್ಮ ಕೇರಿಗಳಿಗೆ ಬಂದು ನೋಡಿ ವಾಸ್ತವ ಚಿತ್ರಣ ಲಭಿಸುವುದು. ಇದೇನಾ ಬಾಬಾ ಸಾಹೇಬ್‍ ಅಂಬೇಡ್ಕರ್‍ ಅವರು ಕಂಡ ಕನಸು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, 2018 ರ ಚುನಾವಣೆಗೆ ಸಮುದಾಯದ ಮತಗಳು ಬೇಕೆಂದರೆ ಸಮಾರಂಭದಲ್ಲಿ ಪಾಲ್ಗೊಳ್ಳಿ ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಆಗ್ರಹಿಸಿದರು.

ಜಗಜೀವನ್‍ ರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಮೂಗೂರು ಸಿದ್ದರಾಜು, ನಗರಪಾಲಿಕೆ ಸದಸ್ಯ ಎಸ್.ಸ್ವಾಮಿ, ಸಮಾಜ ಸೇವಕ ಎಸ್.ಶಂಕರ್‍ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Leave a Reply

comments

Related Articles

error: