ಮೈಸೂರು

ಹಸಿರೀಕರಣ ವಲಯದ ಕಛೇರಿಗೆ ಭೇಟಿ ನೀಡಿ ಸಸಿ ನೆಡಿಸುವಂತೆ ಕನ್ನಡ ಕ್ರಾಂತಿದಳದ ಮನವಿ

ಮೈಸೂರು,ಮಾ.26:- ಕನ್ನಡ ಕ್ರಾಂತಿದಳದ ಯುವಘಟಕದ ಅಧ್ಯಕ್ಷರಾದ ತೇಜಸ್ವಿ ಕುಮಾರ್ ಅವರು  ಇಂದು ನಗರದ 51 ನೇ ವಾರ್ಡಗೆ ಸೇರಿದ ರಾಮಾನುಜ ರಸ್ತೆಗೆ ಸಂಬಂಧ ಪಟ್ಟಂತೆ ಮೈಸೂರು ನಗರ ಹಸಿರೀಕರಣ ವಲಯದ ಕಛೇರಿಗೆ ಭೇಟಿ ನೀಡಿ ಸಸಿ ನೆಡಿಸುವಂತೆ ಮನವಿ ಮಾಡಿದರು.

ಅರಣ್ಯಾಧಿಕಾರಿಯಾದ ಗೋವಿಂದ ರಾಜು  ಅವರಿಗೆ ಮನವಿ ನೀಡಿದರು. ಕಳೆದ ಮೂರು ವರ್ಷದ ಹಿಂದೆ   ಮೈಸೂರು ನಗರದ 51 ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ರಾಮಾನುಜ ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಹಲವಾರು ಮರಗಳನ್ನು ತೆರವು ಮಾಡಲಾಗಿದೆ. ಆದರೆ ಈಗ ರಸ್ತೆ ಅಗಲೀಕರಣವಾದರೂ ರಸ್ತೆಗೆ ಹೊಂದಿ ಕೊಂಡಂತೆ ಇರುವ ಅಕ್ಕ ಪಕ್ಕದಲ್ಲಿ ಜನರಿಗೆ ಅನುಕೂಲವಾಗುವಂತೆ ಸಸಿ ನೆಡುವ ಕೆಲಸವಾಗಿಲ್ಲ. ಆದ್ದರಿಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಗಮನಕ್ಕೆ ತೆಗೆದುಕೊಂಡು 51 ನೇ ವಾರ್ಡ್  ವ್ಯಾಪ್ತಿಗೆ ಸೇರುವ ರಾಮಾನುಜ ರಸ್ತೆ ಜೆ ಎಸ್ ಎಸ್ ಕಡೆಯಿಂದ ಸೆಂಟ್ ಮೇರೀಸ್ ವೃತ್ತದ ತನಕ ಇರುವ ರಸ್ತೆ ಬದಿಯಲ್ಲಿ ಸಸಿ ನೆಟ್ಟು ಸಸಿಗೆ ರಕ್ಷಣೆ ಒದಗಿಸುವ ರಕ್ಷಾ ಕವಚವನ್ನು ಹಾಕಿ ಕೊಡಬೇಕೆಂದು ಕನ್ನಡ ಕ್ರಾಂತಿದಳದ ವತಿಯಿಂದ ಒತ್ತಾಯ ಪೂರ್ವಕ ಮನವಿ ಮಾಡಿಕೊಂಡಿದ್ದೇವೆಂದು ತೇಜಸ್ವಿ ಕುಮಾರ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: