ಸುದ್ದಿ ಸಂಕ್ಷಿಪ್ತ
ಏ.1 ರಿಂದ ಜೆಎಸ್ಎಸ್ ಚಿತ್ರಕಲಾ ಬೇಸಿಗೆ ಶಿಬಿರ
ಮೈಸೂರು,ಮಾ.26 : ಜೆಎಸ್ಎಸ್ ಚಿತ್ರಕಲಾ ಶಿಬಿರ 2019 ಅನ್ನು ಏ.1 ರಿಂದ 17ರವರೆಗೆ ಮೂರು ವಿಭಾಗಗಳಲ್ಲಿ ಏರ್ಪಡಿಸಲಾಗಿದೆ.
4ನೇ ತರಗತಿಯವರೆಗೆ, 7ನೇ ತರಗತಿಯವರೆಗೆ ನಂತರ 10ನೇ ತರಗತಿಯವರೆಗೆ ಹೀಗೇ ಮೂರು ವಿಭಾಗಗಳಲ್ಲಿ ಶಿಬಿರವನ್ನು ರಾಮಾನು ರಸ್ತೆಯಲ್ಲಿರುವ ಜೆಎಸ್ಎಸ್ ವಿದ್ಯಾಪೀಠದ ಬಾಲಜಗತ್ ಶಾಲಾ ಆವರಣದಲ್ಲಿ ನಡೆಸಲಾಗುವುದು.
ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ನಿಸರ್ಗ ಚಿತ್ರರಚನೆ ಸಲುವಾಗಿ ಪ್ರವಾಸವನ್ನು ಕರೆದುಕೊಂಡು ಹೋಗಲಾಗುವುದು, ಏ.17ರಂದು ಸಮಾರೋಪ ಸಮಾರಂಭದಲ್ಲಿ ಉತ್ತಮ ಚಿತ್ರಗಳಿಗೆ ಬಹುಮಾನ ವಿತರಿಸಲಾಗುವುದು. (ಕೆ.ಎಂ.ಆರ್)