ಮೈಸೂರು

2019ರ ಮಿಸ್ಟರ್ ಇಂಡಿಯಾ ಮಲ್ಟಿ ಮೀಡಿಯಾ ಫ್ಯಾಷನ್ ಶೋನಲ್ಲಿ ಮೈಸೂರು ರೈತನ ಮಗ ಆಯ್ಕೆ

ಮೈಸೂರು,ಮಾ.27:- 2019ರ ಮಿಸ್ಟರ್ ಇಂಡಿಯಾ ಮಲ್ಟಿ ಮೀಡಿಯಾ ಫ್ಯಾಷನ್ ಶೋನಲ್ಲಿ ಮೈಸೂರಿನ‌ ರೈತರೋರ್ವರ ಮಗ ನಾಗೇಶ್ ವಿಜೇತರಾಗಿ ಆಯ್ಕೆಯಾಗಿದ್ದಾರೆ.

ABCD ಮತ್ತು ಫಿಲ್ಮ್ ಅಂಡ್ ಫ್ಯಾಷನ್ ಸಂಸ್ಥೆ ಆಯೋಜಿಸಿದ್ದ ಫ್ಯಾಷನ್ ಶೋ ಇದಾಗಿದ್ದು, 100 ಜನರನ್ನೊಳಗೊಂಡ ಸ್ಪರ್ಧೆಯಲ್ಲಿ  ನಾಗೇಶ್ ವಿಜೇತರಾಗಿದ್ದಾರೆ. ವಿಜೇತರಾಗುತ್ತಿದ್ದಂತೆ ಬಾಲಿವುಡ್‌ನಿಂದ ಆಫರ್ ಬಂದಿದ್ದು, ಮುಂಬೈನಲ್ಲಿ  ಫ್ಯಾಷನ್ ಶೋನಲ್ಲಿ ನಡೆದಿತ್ತು. ಈಗಾಗಲೇ ಬಾಲಿವುಡ್ ಚಿತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಫೋಟೋ ಶೂಟ್ ಮುಗಿಸಿ ನಾಗೇಶ್ ತವರಿಗೆ ಬಂದಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದವರಾಗಿರುವ ನಾಗೇಶ್ ಅವರ ಭಾವಚಿತ್ರವನ್ನು 2020ರ ಮಿಸ್ಟರ್ ಇಂಡಿಯಾಗೆ ಬಳಕೆಮಾಡಲಾಗಿದೆ. ರೈತ ಚಿನ್ನಬುದ್ದಿ ಮತ್ತು ರೇಣುಕ ದಂಪತಿಯ ಪುತ್ರರಾಗಿರುವ ಇವರು ಮೂಲತ: ರೈತ ಕುಟುಂಬದವರಾಗಿದ್ದಾರೆ. ಮಾಡೆಲ್‌ನಲ್ಲಿ ಹೆಸರು ಮಾಡಿ ಬಾಲಿವುಡ್‌ನತ್ತ ಮುಖ ಮಾಡಿರುವ ಇವರು ಈಗಾಗಲೇ ಕನ್ನಡದಲ್ಲಿ ಕಿರುದನಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ನಟನಾಗಿ ಕಾಣಿಕೊಂಡಿರುವ ನಾಗೇಶ್ ಈಗಾಗಲೇ ಹಲವು‌ ಕಿರುಚಿತ್ರಗಳ ಮೂಲಕ ಹೆಸರು ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: