ಮೈಸೂರು

ಮಹಿಳೆಯರು ಪುರುಷರೆಂಬ ಭೇದ-ಭಾವ ಇರುವಲ್ಲಿಯವರೆಗೆ ಅಭಿವೃದ್ಧಿ ಸಾಧ್ಯವಿಲ್ಲ : ಎಂ.ಎನ್.ನಟರಾಜ್

ಮೈಸೂರು,ಮಾ.27:- ಮಹಿಳೆಯರು ಪುರುಷರೆಂಬ ಭೇದ-ಭಾವ ಇರುವಲ್ಲಿಯವರೆಗೆ  ಅಭಿವೃದ್ಧಿ ಸಾಧ್ಯವಿಲ್ಲ ಎಂದು ನೆಹರು ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು.

ಅವರಿಂದು ಟಿ.ಕೆ.ಲೇಔಟ್ ನಲ್ಲಿರುವ ಯೂತ್ ಹಾಸ್ಟಲ್ ನಲ್ಲಿ ನೆಹರು ಯುವ ಕೇಂದ್ರ ಮೈಸೂರು ಹಾಗೂ ಸ್ನೇಹಸ್ಪಂದನ ಮಹಿಳಾ ಮಂಡಳಿ ಕುವೆಂಪುನಗರ ಸಂಯುಕ್ತಾಶ್ರಯದಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾರ್ಚ್ ತಿಂಗಳು ಪೂರ್ಣ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಹಿಳಾವರ್ಗದವರ ಭೇದಭಾವ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಆಚರಣೆ ನಡೆಯುತ್ತಿದೆ. ಮಾತೃದೇವೋಭವ ಸಂಸ್ಕೃತಿ ನಮ್ಮದು. ಮಹಿಳೆಯರು-ಪುರುಷರಲ್ಲಿನ ಭೇದಭಾವ ಭಾರತದಲ್ಲಿ ಮಾತ್ರವಲ್ಲ ಮುಂದುವರಿದ ದೇಶಗಳಾದ ಅಮೇರಿಕದಲ್ಲಿಯೂ ಇದೆ. ಅಮೇರಿಕದಲ್ಲಿ ಇದುವರೆಗೂ ಮಹಿಳಾ ಅಧ್ಯಕ್ಷರಾಗಿಲ್ಲ. ಹಿಲರಿ ಕ್ಲಿಂಟನ್ ಸ್ಪರ್ಧಿಸಿದಾಗ ಅವರನ್ನು ಸೋಲಿಸಲಾಯಿತು ಎಂದರು. ಗಂಡು ಹೆಣ್ಣಿನ ನಡುವೆ ಅನುಪಾತ ಹೆಚ್ಚುತ್ತಿದೆ. ಸಾವಿರ ಪುರುಷರಿಗದ್ದರೆ, ಒಂಭೈನೂರಾ ಅರವತ್ತೆರಡು ಮಹಿಳೆಯರಿದ್ದಾರೆ. ಭ್ರೂಣ ಹತ್ಯೆ ಸೇರಿದಂತೆ ಅನೇಕ ರೀತಿಯಿಂದ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ವಂಶಾಭಿವೃದ್ಧಿ ಬೆಳೆಯಲಿ ಅನ್ನೋ ಉದ್ದೇಶಕ್ಕೆ ಬೇರೆ ರಾಜ್ಯದವರು ಜಾತಿ, ಧರ್ಮ ಲೆಕ್ಕಿಸದೇ ವಿವಾಹ ಮಾಡಿಸಿಕೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾನವಹಕ್ಕುಗಳ ಸೇವಾಸಮಿತಿಯ ರಾಜ್ಯಾಧ್ಯಕ್ಷೆ ಸುಮಿತ್ರ ರಮೇಶ್, ಸಿಎಸ್ ಐ ವೆಸೆಲಿ ಗರ್ಲ್ಸ್ ಬೋರ್ಡಿಂಗ್ ಹೋಮ್ ಮೇಲ್ವಿಚಾರಕಿ ಗೀತಾ ಶ್ರೀನಿವಾಸ್, ಮನಶಾಸ್ತ್ರಜ್ಞೆ ದೇವಕಿ ಮಾಧವ್ ಅವರನ್ನು ಸನ್ಮಾನಿಸಲಾಯಿತು.  ಸ್ನೇಹಸ್ಪಂದನ ಮಹಿಳಾ ಮಂಡಳಿಯ ಅಧ್ಯಕ್ಷೆ ವಿಜಯ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: