ಮೈಸೂರು

ನಂಜನಗೂಡು ಜಾತ್ರೆ : ಪೂರ್ವಸಿದ್ಧತಾ ಸಭೆ

ನಂಜನಗೂಡು ದೊಡ್ಡಜಾತ್ರಾ ಕುರಿತು ಮೈಸೂರು ಜಿಲ್ಲಾಧಿಕಾರಿ  ಡಿ.ಸಿ ರಂದೀಪ್ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

ಏಪ್ರೀಲ್ 7ರಂದು ನಡೆಯುವ ನಂಜನಗೂಡು ದೊಡ್ಡ ರಥೋತ್ಸವಕ್ಕೆ ಸಿದ್ದತೆಗಳು ನಡೆಯುತ್ತಿದ್ದು, ರಧದ ಬೀದಿಗೆ ಡಾಂಬರೀಕರಣ,ಬರುವ ಭಕ್ತರಿಗೆ ಕುಡಿಯು ನೀರಿಗಾಗಿ  ತಾತ್ಕಾಲಿಕ ನಲ್ಲಿಗಳ ಅಳವಡಿಕೆ,ತಾತ್ಕಾಲಿಕ ಶೌಚಾಲಯ ನಿರ್ಮಾಣ, ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಮುಂಜಾಗ್ರತೆ, ತಾತ್ಕಾಲಿಕ ಪ್ರಥಮ ಚಿಕಿತ್ಸೆ ಹಾಗೂ ಆರೋಗ್ಯ ಕೇಂದ್ರ ತೆರೆದು ಆಬ್ಯುಲೆನ್ಸ್ ವಾಹನದೊಂದಿಗೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿ ನಿಯೋಜಿಸುವುದು ಆರಕ್ಷಕ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ನೀಡುವುದು  ಹಾಗೂ ರಥದ ಚಾಲನೆಗೆ  ಅಡಚಣೆಯಾಗದಂತೆ ರೈಲ್ವೆ ಹಾಗೂ ಕೆ.ಎಸ್.ಆರ್.ಟಿ.ಸಿ ವರ್ಕಶಾಪ್ ನ ನುರಿತ ಸಿಬ್ಬಂದಿ ಹೆಚ್.ಟಿ ಬೋಲ್ಟ್ಸ್ ಹಾಗೂ ಹೆವೀ ಕ್ರೇನ್ ಸಮೇತ  ಹಾಜರಿರುವಂತೆ  ಸಭೆಯಲ್ಲಿ ಸೂಚಿಸಲಾಯಿತು.

ರಥದ ಚಕ್ರದ ಉದ್ದನೆಯ ಮರ ಎತ್ತುವವರಿಗೆ ಇನ್ಶೂರೆನ್ಸ್ ಮಾಡಿಸುವುದು ಹಾಗೂ ಸ್ವಯಂ ಸೇವಕರಿಗೆ ಟಿ. ಶರ್ಟ್ ನೀಡುವುದು ಮತ್ತು ನದಿ ಸ್ವಚ್ಚ ಮಾಡುವರಿಗೆ ಪ್ರೋತ್ಸಾಹ ಧನ ನೀಡುವು ದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

Leave a Reply

comments

Related Articles

error: