ಮೈಸೂರು

ಶಿಸ್ತುಬದ್ಧ ಜೀವನಕ್ಕೆ ಶಿಬಿರಗಳು ಸಹಕಾರಿ : ಮಲ್ಲಿಗೆ ವೀರೇಶ್

ಮೈಸೂರಿನ ಯೂತ್ ಹಾಸ್ಟೆಲ್‍ನಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು  ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಿಬಿರಗಳು ಸಹಕಾರಿಯಾಗಲಿದೆ. ಶಿಬಿರಗಳ ಮೂಲಕ ಕೌಶಲ್ಯವನ್ನು ಬೆಳೆಸಿಕೊಂಡು, ಉತ್ತಮ ಸಮಾಜವನ್ನು ರೂಪಿಸಬಹುದು ಎಂದರು.

ಈ ಸಂದರ್ಭ ಮಹಾ ನಗರಪಾಲಿಕೆ ಉಪ ಮಹಾಪೌರರಾದ ರತ್ನ ಲಕ್ಷ್ಮಣ್, ಕಾವೇರಿ ಗ್ರಾಮೀಣ ಅಧಿಕಾರಿ ನಳಿನಿ ತಮ್ಮಯ್ಯ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

 

 

 

Leave a Reply

comments

Related Articles

error: