ಪ್ರಮುಖ ಸುದ್ದಿ

ಮತದಾನ ಜಾಗೃತಿ : ದ್ವಿಚಕ್ರ ವಾಹನದಲ್ಲಿ ರಾಜ್ಯಾದ್ಯಂತ ಅಭಿಯಾನ

ರಾಜ್ಯ(ಮಡಿಕೇರಿ) ಮಾ.28 : – ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸಮರ್ಥ ಕನ್ನಡಿಗರು ಸಂಘಟನೆ ಅಖಂಡ ಕರ್ನಾಟಕ ದ್ವಿಚಕ್ರ ವಾಹನ ಅಭಿಯಾನವನ್ನು ನಡೆಸುತ್ತಿದೆ.

ಈಗಾಗಲೇ ರಾಜ್ಯದ 24 ಜಿಲ್ಲೆಗಳಲ್ಲಿ “ಸುಭದ್ರ ರಾಷ್ಟ್ರಕ್ಕಾಗಿ ಮತದಾನದ ಅರಿವು” ಘೋಷ ವಾಕ್ಯದೊಂದಿಗೆ ಜಾಗೃತಿ ಮೂಡಿಸಿರುವ ಸಂಘಟನೆಯ ಪ್ರಧಾನ ಸಂಚಾಲಕ ಎಸ್. ಬಸವರಾಜು, ಮಡಿಕೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿ.ಪಂ ಸಿಇಒ ಲಕ್ಷ್ಮಿ ಪ್ರಿಯಾ ಅವರನ್ನು ಭೇಟಿಯಾಗಿ ತಮ್ಮ ಜಾಗೃತಿ ಅಭಿಯಾನದ ಕುರಿತು ಮಾಹಿತಿ ನೀಡಿದರು. ಅಲ್ಲದೆ ಕರ ಪತ್ರವನ್ನು ಸಲ್ಲಿಸಿ ಮುಂದಿನ ಪಯಣ ಬೆಳೆಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: