ಮೈಸೂರು

ಮೈಸೂರು-ಕೊಡಗು  ಲೋಕಸಭಾ ಕ್ಷೇತ್ರ : 5 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಮೈಸೂರು, ಮಾ.28:-  ಮೈಸೂರು-ಕೊಡಗು  ಲೋಕಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ನಿನ್ನೆ ನಡೆಯಿತು.  ನಾಮಪತ್ರ ಪರಿಶೀಲನೆಯ ನಂತರ 5 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿರುತ್ತದೆ.
ಪಕ್ಷೇತರ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಆನಂದ ಜೆ.ಜೆ., ಶಿವಸೈನ್ಯ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಸತೀಶ್ ಪೈ, ಸಂಪೂರ್ಣ ಭಾರತ್ ಕ್ರಾಂತಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಮಧು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಖಿಲ್ ಅಹಮದ್, ಬಹುಜನ ಸಮಾಜವಾದಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಸಿದ್ಧರಾಜು ಎಂ. ಇವರುಗಳ ನಾಮಪತ್ರಗಳು ತಿರಸ್ಕೃತವಾಗಿರುತ್ತದೆ ಎಂದು ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: