ಪ್ರಮುಖ ಸುದ್ದಿಮೈಸೂರು

ಸಿಎಂ ಆಪ್ತ ಸಚಿವ ಸಿ.ಎಸ್.ಪುಟ್ಟರಾಜು ಮತ್ತವರ ಮೈಸೂರಿನಲ್ಲಿರುವ ಅಣ್ಣನ ಮಗನ ಮನೆಯ ಮೇಲೆ ಐಟಿ ದಾಳಿ

ಹಾಸನದಲ್ಲಿರುವ ಲೋಕೋಪಯೋಗಿ ಇಲಾಖಾ ಕಛೇರಿ
ಮೈಸೂರಿನಲ್ಲಿರುವ ಅಣ್ಣನ ಮಗನ ಮನೆ

ರಾಜ್ಯ(ಮಂಡ್ಯ),ಮಾ.28:- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತವರ ಸಹೋದರ ಹೆಚ್.ಡಿ.ರೇವಣ್ಣ ಅವರ ಆಪ್ತರಾದ ಸಚಿವ ಸಿ.ಎಸ್.ಪುಟ್ಟರಾಜು ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ  ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಪುಟ್ಟರಾಜು ಅವರ ಮೈಸೂರಿನಲ್ಲಿರುವ ಅಣ್ಣನ ಮಗನ ಮನೆಯ ಮೇಲೂ ಐಟಿ ದಾಳಿ ನಡೆದಿದೆ.

ಅಧಿಕಾರಿಗಳು ಹಾಸನದ ಮೂರು ಕಡೆ ದಾಳಿ ನಡೆಸಿದ್ದು, ಸಚಿವ ಹೆಚ್.ಡಿ.ರೇವಣ್ಣ ಅವರ ಆಪ್ತರಾಗಿರುವ ನಾರಾಯಣ ರೆಡ್ಡಿ, ಅಶ್ವತ್ಥ ಹಾಗೂ ರಾಯಗೌಡ ಅವರ ಮನೆಯ ಮೇಲೆ ದಾಳಿ ನಡೆದಿದೆ. ಲೋಕೋಪಯೋಗಿ ಕಛೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಅವರ ವಿಚಾರಣೆ ನಡೆಸಲಾಗುತ್ತಿದೆ.

ಸಚಿವ ಪುಟ್ಟರಾಜು ಅವರ ಅಣ್ಣನ ಮಗ ಅಶೋಕ್ ಕುಮಾರ್ ಅವರ ಮನೆ ಮೈಸೂರಿನ ವಿಜಯನಗರದಲ್ಲಿದ್ದು ಅಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪುಟ್ಟರಾಜು ಅವರ ಸ್ವಗ್ರಾಮಪಾಂಡವಪುರ ತಾಲೂಕಿನ ಚಿನಕುರಳಿ ಮೇಲೂ ದಾಳಿ ನಡೆದಿದೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಐಟಿ ದಾಳಿ ಕುರಿತು ಹೇಳಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಐಟಿ ದಾಳಿ ನಡೆದಿದೆ. 4 ಕಾರ್ ನಲ್ಲಿ   ಐಟಿ ಅಧಿಕಾರಿಗಳು ಬಂದಿಳಿದಿದ್ದು, ಸಿ.ಆರ್.ಪಿ.ಎಫ್ ಸಿಬ್ಬಂದಿಗಳ ಭದ್ರತೆಯಲ್ಲಿ  ದಾಳಿ ನಡೆಯುತ್ತಿದೆ. ಮಂಡ್ಯಕ್ಕೆ ಹಣ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: