ಪ್ರಮುಖ ಸುದ್ದಿ

ಐಟಿ ಅಧಿಕಾರಿಗಳು ಅಕ್ರಮ ದಾಖಲಾತಿ ತೋರಿಸಿದರೆ ರಾಜಕೀಯ ನಿವೃತ್ತಿ : ಸಚಿವ ಸಿ.ಎಸ್.ಪುಟ್ಟರಾಜು ಪ್ರತಿಕ್ರಿಯೆ

ರಾಜ್ಯ(ಮಂಡ್ಯ)ಮಾ.28:- ಸಚಿವ ಸಿ.ಎಸ್.ಪುಟ್ಟರಾಜು ಅವರ ಪಾಂಡವಪುರದಲ್ಲಿರುವ ಚಿನಕುರಳಿ ಮನೆಯ ಮೇಲೆ ಆದಾಯ ಅಧಿಕಾರಿಗಳು ದಾಳಿ ನಡೆಸಿದ್ದು,ಐಟಿ ದಾಳಿ ನಂತರ ಸಿ.ಎಸ್. ಪುಟ್ಟರಾಜು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇವತ್ತು ಐಟಿ ಅಧಿಕಾರಿಗಳು ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಐಟಿ ಅಧಿಕಾರಿಗಳನ್ನು ನಮ್ಮ ಮನೆಗೆ ಕಳಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಒಂದು ತಿಂಗಳ ಮುಂಚೆಯೇ ಬಿಜೆಪಿಯವರು ಐಟಿ ದಾಳಿ ನಡೆಸಬೇಕಿತ್ತು. ಈಗೇ ಯಾಕೆ ಈ ಐಟಿ ರೈಡ್ ಮಾಡಿಸಿದ್ದಾರೆ. ಯಾವುದೇ ದಾಖಲೆಗಳನ್ನು ಐಟಿ ಅಧಿಕಾರಿಗಳು ಕೇಳಿದರೂ ನಾನು ಕೊಡುತ್ತೇನೆ. ಐಟಿ ಅಧಿಕಾರಿಗಳು ನನ್ನ ಮನೆಯಿಂದ ಏನನ್ನು ತೆಗೆದುಕೊಂಡು ಹೋಗಲ್ಲ.

ಇದು ಕೇಂದ್ರ ಪ್ರೇರಿತ ಐಟಿ ದಾಳಿ. ಬಿಜೆಪಿ ಬಂಡವಾಳವನ್ನು ಇವತ್ತಿಂದ ನಾವು ನಮ್ಮ ಕಾರ್ಯಕರ್ತರು ಬಯಲು ಮಾಡ್ತೇವೆ. ಇದು ಐಟಿ ದಾಳಿಯಲ್ಲ.  ಇದು ಐಟಿ ರಾಜಕೀಯ. ನಾವು ಅಕ್ರಮ ಮಾಡಿರೋ ದಾಖಲಾತಿ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಐಟಿ ದಾಳಿ ನಂತರ ನಗುಮೊಗದಲ್ಲೇ ಸಚಿವ ಪುಟ್ಟರಾಜು ಅವರು ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: