ಮೈಸೂರು

ಕೊಡಗಿನಲ್ಲಿ ಧಾರಾಕಾರ ಮಳೆ

ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಧಾರಾಕಾರವಾಗಿ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಆತಂಕಕ್ಕೆ ಒಳಾಗಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು, ಮಡಿಕೇರಿ ತಾಲ್ಲೂಕಿನ ನಾಪೋಕ್ಲು, ಬಲ್ಲಮಾವಟಿ, ನೆಲಜ್ಜಿ, ಎಮ್ಮೆಮಾಡು, ಬೇರೂರು ಗ್ರಾಮದಲ್ಲಿ ಮಳೆ  ಭಾರೀ ಪ್ರಮಾಣದಲ್ಲಿ ಸುರಿದಿದೆ.

ಕುಶಾಲನಗರ, ಮಡಿಕೇರಿ ನಗರ ಸೇರಿದಂತೆ ಸುತ್ತುಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು. ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಕೊಯ್ಲು ಇನ್ನೂ ನಡೆಯುತ್ತಿದ್ದು, ಹಣ್ಣು ಉದುರುವ ಸಾಧ್ಯತೆಯಿದೆ ಹೆಚ್ಚಾಗಿದೆ.

Leave a Reply

comments

Related Articles

error: