ಕರ್ನಾಟಕಪ್ರಮುಖ ಸುದ್ದಿ

ಐಟಿ ದಾಳಿಯಿಂದ ದೇವೇಗೌಡರ ಕುಟುಂಬವನ್ನು ಹೆದರಿಸಲಾಗದು: ಸಚಿವ ಎಚ್.ಡಿ.ರೇವಣ್ಣ ಆಕ್ರೋಶ

ಹಾಸನ (ಮಾ.28): ಐಟಿ ಮುಖ್ಯಸ್ಥರು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದ್ದಾರೆ. ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಬಿಜೆಪಿ ಹತಾಶೆ ಮನೋಭಾವದಿಂದ ಐಟಿ ದಾಳಿ ಮಾಡಿಸಿದೆ.

ಐಟಿ ದಾಳಿಯಿಂದ ದೇವೇಗೌಡರನ್ನು ಹೆದರಿಸಬಹುದು ಎಂದು ಕೊಂಡಿದ್ದರೆ ಅದು ತಪ್ಪು. ಇಂತಹ ದಾಳಿಗಳಿಗೆ ದೇವೇಗೌಡರ ಕುಟುಂಬ ಯಾವತ್ತಿಗೂ ಹೆದರುವುದಿಲ್ಲ. ಇಂತಹ ಸಾಕಷ್ಟು ದಾಳಿಯನ್ನು ದೇವೇಗೌಡರು ನೋಡಿದ್ದಾರೆ ಎಂದು ಅವರು ಹೇಳಿದರು.

ಈ ದಾಳಿಯಿಂದ ಜೆಡಿಎಸ್‍ಗೆ ಶೇ.10ರಷ್ಟು ಓಟು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಚುನಾವಣಾ ರಾಜಕಾರಣಕ್ಕೆ ಇಂತಹ ದಾಳಿಗಳಿಂದ ನಾವು ಹೆದರಿ ಮನೆಯಲ್ಲಿ ಕೂರುವುದಿಲ್ಲ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: