ಪ್ರಮುಖ ಸುದ್ದಿಮೈಸೂರು

ಪ್ರಾಮಾಣಿಕತೆ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ : ರಘು ಆಚಾರ್

ಗೋ.ಮದುಸೂಧನ್ ಗೆ ಸಾಮಾನ್ಯ ಜ್ಞಾನವಿಲ್ಲ : ವೆಂಕಟೇಶ್

ಮೈಸೂರು.ಮಾ.28 : ಮಾಜಿ ಮುಖ್ಯ ಮಂತ್ರಿ ದಿ.ದೇವರಾಜ್ ಅರಸ್ ಅವರು ಮತಕ್ಕಾಗಿ ಹಣ ಹಂಚಿಕೆ ಮಾಡುತ್ತಿದ್ದರು ಎಂಬ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ದೇವರಾಜು ಅರಸು ಅವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಬಿಜೆಪಿಯಲ್ಲಿ ಎಷ್ಟು ಮಂದಿ‌ ಪ್ರಾಮಾಣಿಕರು ಇದ್ದಾರೆಂದು ಬಹಿರಂಗ ಚರ್ಚೆ ನಡೆಯಲಿ, ತಾವು ಸಿದ್ಧವಿದ್ದೇವೆ ಎಂದು ಸವಾಲೆಸೆದ ಅವರು, ಪಕ್ಷ ಹಾಗೂ ಜಾತಿಯಡಿಯಲ್ಲಿ ಸ್ಪರ್ಧಿಸುವ ತಾವು ಒಂದೊಮ್ಮೆ ಪಕ್ಷೇತರನಾಗಿ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿಯಾಗಿ ನಾನೇ ಸ್ಪರ್ಧಿಸುವೆ ಆಗ ಪ್ರಾಮಾಣಿಕತೆಯನ್ನು ಪರೀಕ್ಷಿಸೋಣ ಎಂದು ಪಂಥಾಹ್ವಾನ ನೀಡಿದರು.

ವಿರೋಧಿಗಳನ್ನು ಮಟ್ಟ ಹಾಕಲು ಐಟಿ ಧಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಕೇಂದ್ರ ಅನುದಾನದಿಂದ ನಡೆದಿರುವ ಕಾಮಗಾರಿಗಳು ಎಷ್ಟರಮಟ್ಟಿನ ಗುಣಮಟ್ಟ ಕಾಯ್ದುಕೊಂಡಿವೆ ಎಂದು ಪರಿಶೀಲಿಸಿ, ಅಲ್ಲದೇ ಜಿಲ್ಲೆಯಲ್ಲಿ ಎಷ್ಟು ಗ್ರಾ.ಪಂ.ಗಳಿವೆ ಎಂಬ ಸಾಮಾನ್ಯ ಜ್ಞಾನ ಇಲ್ಲದವರಿಂದ ಎಂಥಹ ಅಭಿವೃದ್ಧಿ ಸಾಧ್ಯವೆಂದು ಲೇವಡಿ ಮಾಡಿದರು.

ಕಡ್ಡಾಯಗೊಳಿಸಿ : ಜನಪ್ರತಿನಿಧಿಗಳ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಓದಬೇಕೆಂಬುದನ್ನು ಕೂಡಲೇ ಆದೇಶ ಹೊರಡಿಸಬೇಕೆಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸುವೆ ಎಂದರು.

ಗೋ.ಮ ಗೆ ಸಾಮಾನ್ಯ ಜ್ಞಾನವಿಲ್ಲ :

ಕಾಂಗ್ರೆಸ್ ವಕ್ತಾರ ಹೆಚ್.ಎ. ವೆಂಕಟೇಶ್ ಅವರು ಮಾತನಾಡಿ,  ಚುನಾವಣಾಧಿಕಾರಿಯನ್ನು ದೂರುವ  ಬಿಜೆಪಿ ವಕ್ತಾರ ಗೋ.ಮದುಸೂಧನ್ ಅವರಿಗೆ ಸಾಮಾನ್ಯ ಜ್ಞಾನವಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರ ನಾಮಪತ್ರ ತಿರಸ್ಕರಿಸಿ ಎಂದು ಹೇಳುವ‌ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಬಿಜೆಪಿ :

ಪಕ್ಷಕ್ಕಾಗಿ ದುಡಿದ ದಿ.ಅನಂತಕುಮಾರ್ ಅವರ ಪತ್ನಿಗೆ ಟಿಕೆಟ್ ತಪ್ಪಿಸುವ ಮೂಲಕ ಮೋದಿಯವರು ಬಿಜೆಪಿಯ ಪರಮಾಧಿಕಾರಿಯಾಗಿದ್ದು, ಪಕ್ಷ ಕಟ್ಡಿದ ಹಿರಿಯರಾದ ಎಲ್.ಕೆ ಅಡ್ವಾಣಿ, ಮುರಳಿ‌ಮನೋಹರ ಜೋಷಿ, ಯಶವಂತ ಸಿನ್ಹಾ, ಸುಷ್ಮಾ ಸ್ವರಾಜ್. ಉಮಾ ಭಾರತಿ ಮೊದಲಾದವರನ್ನ ಮೂಲೆಗುಂಪು ಮಾಡುವ ಮೂಲಕ  ಸರ್ವಾಧಿಕಾರಿ ‘ಮೋದಿ ಬಿಜೆಪಿಯನ್ನು’  ಕಟ್ಟುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಜಿ.ವೆಂಕಟ ಸುಬ್ಬಯ್ಯ, ನಾಗಭೂಷಣ ತಿವಾರಿ, ಡೈರಿ ವೆಂಕಟೇಶ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: