ಪ್ರಮುಖ ಸುದ್ದಿಮೈಸೂರು

ಮಾ.30ರಂದು ಲಿಂಗೈಕ್ಯ ಮಾತೆ ಮಹಾದೇವಿಯವರ ನುಡಿನಮನ

ಮೈಸೂರು,ಮಾ.28 :ಈಚೆಗೆ ಲಿಂಗೈಕ್ಯರಾದ ಡಾ.ಪೂಜ್ಯ ಮಾತೆ ಮಹಾದೇವಿ ಯವರ ನುಡಿನಮನ ಕಾರ್ಯಕ್ರಮವನ್ನು ಮಾ.30ರಂದು ಸಂಜೆ 4 ಗಂಟೆಗೆ ಹೊಸಮಠದ ನಟರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ನುಡಿ ನಮನ ಸಮಿತಿ ಸಂಚಾಲಕ ಶರಣ ಮಹಾದೇವಪ್ಪ ಹೇಳಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ನುಡಿನಮನ ಸಲ್ಲಿಸುತ್ತಿದ್ದೇವೆ. ಸುಮಾರು 16 ಮಠಾಧೀಶರು ಬರಲಿದ್ದು, ಬೆಂಗಳೂರಿನ ಖ್ಯಾತ ಚಿಂತಕ ಶ್ರೀ ಸಚ್ಚಿದಾನಂದ ಚಟ್ನಳ್ಳಿಯವರು ಮುಖ್ಯ ಅಥಿತಿಯಾಗಿದ್ದಾರೆ. ಕೂಡಲ ಸಂ ಬಸವ ಧರ್ಮಪೀಠದ ನೂತನ ಅಧ್ಯಕ್ಷ ಶ್ರೀ ಗಂಗಾಮಾತಾಜಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿದಲಿದ್ದಾರೆ ಎಂದರು.

ಸುಮಾರು 4 ದಶಕಗಳ ಕಾಲ ಅವಿಶ್ರಾಂತವಾಗಿ ನಾಡಿನಾದ್ಯಂತ ಬಸವಣ್ಣ ಹಾಗೂ ಶರಣರ ಬದುಕು ಸಂದೇಶಗಳನ್ನು ಸಾರುತ್ತಾ ಬಂದಿದ್ದಾರೆ. ಪ್ರತ್ಯೇಕ ಲಿಂಗಾಯಿತ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದವರು ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ: ಪ್ರತ್ಯೇಕ ಲಿಂಗಾಯಿತ ಧರ್ಮದ ಹೋರಾಟದ ನೇತೃತ್ವ ವಹಿಸಿದ್ದ ಮಾತೆ ಮಹದೇವಿಯವರು ಈಗಾಗಲೇ ಸಾವಿರಾರು ಶಿಷ್ಯ ಬಳಗವನ್ನು ಬೆಳೆಸಿದ್ದು, ಅವರು ಹಾಕಿದ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಹೋರಾಟವನ್ನ ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ತಾವು ಕಾನೂನಿನ ಮೊರೆ ಹೋಗಲಿದ್ದೇವೆ ಎಂದು ತಿಳಿಸಿದರು.

ನುಡಿ ನಮನದ ಸಮಿತಿ ಸದಸ್ಯರಾದ ಲೋಕೇಶ್, ಚಂದ್ರಶೇಖರ್, ಗಂಗಾಧರ್ ಹಾಗೂ ಜಯಣ್ಣ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: