ಪ್ರಮುಖ ಸುದ್ದಿಮೈಸೂರು

ವೈಯುಕ್ತಿಕ ಮಾಹಿತಿಗಾಗಿ ಗುಪ್ತಚರ ಅಧಿಕಾರಗಳಿನ್ನಿರಿಸಿದ ಸಿಎಂ : ರಾಮದಾಸ್ ಆರೋಪ

ಸಂವಿಧಾನ ವಿರೋಧಿ ಚಟುವಟಿಕೆಯಡಿ ದೂರು ದಾಖಲು

ಮೈಸೂರು,ಮಾ.29 : ಸಿಎಂ ಕುಮಾರಸ್ವಾಮಿ ಅವರು ತಮ್ಮ ವೈಯುಕ್ತಿಕ ಮಾಹಿತಿ ಪಡೆಯಲು ಆದಾಯ ತೆರಿಗೆ ಕಚೇರಿಯಲ್ಲಿ ಗುಪ್ತಚರ ಅಧಿಕಾರಿಗಳನ್ನು ಇರಿಸುವ ಮೂಲಕ ಸರ್ಕಾರ ಹಾಗೂ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ನಿನ್ನೆ ರಾಜಧಾನಿ ಬೆಂಗಳೂರಿನ ಐಟಿ ಕಚೇರಿ ಮುಂದೆ ಮೈತ್ರಿ ಸರ್ಕಾರದ ನಾಯಕರು ನಡೆಸಿದ ಪತ್ರಿಭಟನೆಯನ್ನು ವಿರೋಧಿಸಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಕಾನೂನು ಪಾಲಿಸಬೇಕಾದವರೆ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದು, ಐಟಿ ದಾಳಿಯನ್ನು ಬಳಸಿಕೊಂಡು ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ,  ಹಿಂದೊಮ್ಮೆ ನಡೆದ ದಾಳಿಯನ್ನು ಕುಮಾರಸ್ವಾಮಿಯವರೇ ಸ್ವತಃ ಸಮರ್ಥಿಸಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ಅಂದು ಅವರ ಹೇಳಿಕೆಯನ್ನು, ಇಂದಿನ ಬದಲಾವಣೆಯನ್ನು ಪ್ರಶ್ನಿಸಿದರು.

ನಟರು, ರಾಜಕಾರಣಿಗಳು, ಜನಸಾಮಾನ್ಯರು ಎಲ್ಲರೂ ಆದಾಯ ತೆರಿಗೆ ಅಧಿಕಾರಿಗಳಿಗೆ ಒಂದೇ ಎಂದು ನೀಡಿದ್ದ ಹೇಳಿಕೆಯನ್ನು ಇಂದು ಕುಮಾರಸ್ವಾಮಿ ಮರೆತಿದ್ದಾರೆ, ಅಂದು ಇಲ್ಲದ ಆರೋಪವನ್ನು ಇಂದೇಕೆ ಇಲಾಖೆ ಮೇಲೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ. ಅಲ್ಲದೇ ಗೌಪ್ಯತೆ ಬಹಿರಂಗಗೊಳಿಸುವುದು ಸಂವಿಧಾನ ವಿರೋಧಿ ಚಟುವಟಿಕೆಯಾಗಿದ್ದು ಈ ಹಿನ್ನಲೆಯಲ್ಲಿ ಐಪಿಸಿ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಗೌಪ್ಯತೆ ಕಾಪಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಇಂದು ವೈಯುಕ್ತಿಕ ಪ್ರತಿಷ್ಠೆಗಾಗಿ ಸಾರ್ವಜನಿಕಗೊಳಿಸುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ, ಐಟಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದು ನಿಷ್ಪಕ್ಷಪಾತ ಚುನಾವಣಾ ನಡೆಯದಂತಹ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು ತಮ್ಮ ಆಜ್ಞೆಯನ್ನು ಪಾಲಿಸುವವರಿಗೆ ಮಾತ್ರ ನೆಲೆ ಎನ್ನುವಂತಾಗಿದೆ, ಕಾನೂನು ಪಾಲಿಸುವವರೇ ಉಲ್ಲಂಘಿಸುತ್ತಿದ್ದಾರೆ, ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಆಯುಕ್ತರಿಗೆ ಹಾಗೂ ನಿರ್ದೇಶಕರಿಗೆ ಮೇಲ್ ಮೂಲಕ ಪತ್ರ ಬರೆದು ಕ್ರಮಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯಪಾಲರಿಗೆ ದೂರು : ಐಟಿ ದಾಳಿಗೊಳಗಾದ ವ್ಯಕ್ತಿಗಳಿಗೂ ಹಾಗೂ ಅವರ ರಕ್ಷಣೆಗೆ ನಿಂತಿರುವ ರಾಜ್ಯ ನಾಯಕರ ನಡುವೆ ಇರುವ ಸಂಬಂಧವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಭಾರತೀಯ ಜನತಾ ಪಕ್ಷದ ವತಿಯಿಂದ ಇನ್ನೆರಡು ದಿನಗಳಲ್ಲಿ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಐಟಿ ದಾಳಿಯನ್ನು ಖಂಡಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ಸಂವಿಧಾನ ಉಲ್ಲಂಘಿಸಿದ್ದು ಕೂಡಲೇ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್, ಮುಖಂಡರಾದ ವಿ.ಎನ್.ಕೃಷ್ಣ, ಎಂ.ಆರ್.ಬಾಲಕೃಷ್ಣ, ವಿದ್ಯಾ ಅರಸ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: