
ಪ್ರಮುಖ ಸುದ್ದಿಮೈಸೂರು
ಐಟಿ ರೇಡ್ ಗೆ ನಮ್ಮ ವಿರೋಧ ಇಲ್ಲ, ಚುನಾವಣೆ ಸಂದರ್ಭದಲ್ಲಿ ಯಾಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಮೈಸೂರು,ಮಾ.29:- ಇಂಟರ್ವಲ್ ಬಿಟ್ವಿನ್ ಪಾಲಿಟಿಕ್ಸ್ ಇರಬೇಕು. ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಸೋತುಬಿಟ್ಟರು. ನಾನು 11 ಗಂಟೆಗೆ ವಾಪಸ್ ಬಂದುಬಿಟ್ಟೆ. ರಾಜಕೀಯದ ಮಧ್ಯೆ ಇವೆಲ್ಲ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು
ಮೈಸೂರಿನಲ್ಲಿಂದು ಮಾತನಾಡಿದ ಅವರು ಮುದ್ದುಹನುಮೇಗೌಡರು ನಾಮಪತ್ರ ವಾಪಸ್ ಪಡೆಯುತ್ತಾರೆ. ನಾನು ಮಾತನಾಡಿದ್ದೇನೆ. ಅವರದ್ದು ಬೇಡಿಕೆ ಇಲ್ಲ. ನಿಮಗೆ ಅನ್ಯಾಯ ಆಗಿದೆ ಅದನ್ನು ಮುಂದೆ ಅದನ್ನು ಸರಿಪಡಿಸುತ್ತೇವೆ ಅಂತ ಹೇಳಿದ್ದೇನೆ. ಹಾಗಾಗಿ ಇವತ್ತು ಅವರು ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದರು.
ಐಟಿ ರೇಡ್ ಗೆ ನಮ್ಮ ವಿರೋಧ ಇಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಇದು ರೊಟಿನ್ ಕಾರ್ಯವಾಗಿದ್ದರೇ ಬಿಜೆಪಿಯವರ ಬಳಿ ದುಡ್ಡಿಲ್ಲವಾ? ಯಡ್ಯೂರಪ್ಪ 25 ಕೋಟಿ ಶಾಸಕರಿಗೆ ಆಫರ್ ಇಟ್ಟಿರಲಿಲ್ವಾ? ಈಶ್ವರಪ್ಪ ಬಳಿ ನೋಟು ಎಣಿಸುವ ಮಿಷಿನ್ ಸಿಕ್ಕಿರಲಿಲ್ವಾ? ಅವರ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ. ಇದು ನಮಗೆ ಭಯ ಅಲ್ಲ ನನ್ನ ಪ್ರಶ್ನೆ ಆಗಿದೆ. ಇಂತಹ ದಾಳಿಗಳಿಂದ ನಮಗೆ ಬೆಂಬಲಿಸುವವರು,ಸಹಾಯ ಮಾಡುವವರು ಹಿಂದೆ ಹೋಗ್ತಾರೆ. ಕಾರ್ಯಕರ್ತರು ಮುಖಂಡರು ಭಯದಿಂದ ಚುನಾವಣೆ ಹಿಂದೆ ಸರಿಯುತ್ತಾರೆ. ಹೀಗಾಗಿ ಇಂತಹ ದಾಳಿಗಳು ನಮಗೆ ಸ್ವಲ್ಪ ಪರಿಣಾಮ ಬಿರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಮೋದಿಯವರು ಇದನ್ನು ಪಾಲಿಸಬೇಕು ಎಂದರು.
ನಾನು ಸ್ಟಾರ್ ಪ್ರಚಾರಕ. ಸ್ಟಾರ್ ಎಂದರೆ ನಾನು ಹಣೆ ಮೇಲೆ ಸ್ಟಾರ್ ಹಾಕಿಕೊಳ್ಳಬೇಕಾ?, 28 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡುತ್ತೇನೆ. ಜೆಡಿಎಸ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)