ಪ್ರಮುಖ ಸುದ್ದಿಮೈಸೂರು

ಮೋದಿ ಸುಳ್ಳಿನ ಪ್ರಧಾನಿ, ಪ್ರತಾಪ್ ಸಿಂಹ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ : ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು,ಮಾ. 29:- ಈ ಚುನಾವಣೆ ಐತಿಹಾಸಿಕ ಮಹತ್ವದ ಚುನಾವಣೆ. ಇಡಿ ದೇಶದಲ್ಲಿ ಕೋಮುವಾದಿ ವಿರುದ್ಧ ಆಯಾ ರಾಜ್ಯದ ನಾಯಕರು ಆಯಾ ಸಂಬಂಧದ ಮಹಾಘಟಬಂಧನ್  ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ ಖಾಸಗಿ ಹೋಟೆಲ್ ನಲ್ಲಿಂದು ನಡೆದಿದ್ದು,  ಈ ಸಂದರ್ಭ ಮಾತನಾಡಿ ಮೋದಿ ಮತ್ತೆ ಪ್ರಧಾನ ಮಂತ್ರಿ ಆದರೆ ಮತ್ತೊಮ್ಮೆ ಚುನಾವಣೆ ನಡೆಯುವುದು ಕಷ್ಟ ಎಂದಿರುವ ಆರ್ ಎಸ್ ಎಸ್ ಸಹ ಸಂಚಾಲಕ ಭಾಗವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಈ ದೇಶದಲ್ಲಿ ಮೀಸಲಾತಿ ಹೋಗಬೇಕು ಇದರ ಅರ್ಥ ಸಂವಿಧಾನ ಹೋಗಬೇಕು. ಕೇಂದ್ರ ಸಚಿವ ಅನಂತ್ ಕುಮಾರ್ ಹೇಳುತ್ತಾರೆ ಸಂವಿಧಾನ ಬದಲಾವಣೆ ಮಾಡೋದಕ್ಕೆ ಅಂತ. ರಾಷ್ಟ್ರ ಮಟ್ಟದ ಅಧಿಕಾರಿ ಕುಮ್ಮಕ್ಕಿನಿಂದ ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ಕೆಳಗಿಸಬೇಕು. ಉತ್ತರ ಪ್ರದೇಶ್, ಆಂಧ್ರ, ಕೇರಳ ತಮಿಳುನಾಡು, ಪಶ್ಚಿಮ ಬಂಗಳಾದಲ್ಲಿ ಮಹಾ ಘಟಬಂಧನ್ ಮಾಡಿಕೊಂಡಿದ್ದಾರೆ. ದಲಿತರು ಹಿಂದುಳಿದವರು ಎಲ್ಲರೂ ಆತಂಕದಿಂದ ಬದುಕುತ್ತಿದ್ದಾರೆ. ಕೋಮುವಾದವನ್ನು ಹೋಗಲಾಡಿಸಬೇಕು. ಇದು ಕ್ಯಾನ್ಸರ್ ಇದ್ದಂತೆ. ಲೋಕಸಭಾ ಚುನಾವಣಾ ಮೈತ್ರಿ ಮಾಡಿಕೊಂಡು ಈ ಚುನಾವಣೆ ಎದುರಿಸಬೇಕು. ಬಿಜೆಪಿ ಸೋಲಿಸಬೇಕು. ಅದಕ್ಕಾಗಿ ಸೀಟ್ ಹಂಚಿಕೆ ಮಾಡಿಕೊಂಡೆವು. ಎರಡು ಪಕ್ಷದ ಗುರಿ ಇರುವುದು ಬಿಜೆಪಿ ಸೋಲಿಸುವುದೇ ಆಗಿದೆ.  ನಮ್ಮಲ್ಲಿರುವ ಸಣ್ಣ ಪುಟ್ಟ ಸಮಸ್ಯೆಯನ್ನು ಬದಿಗಿಟ್ಟು ಕೋಮುವಾದಿ ಪಕ್ಷ ಸೋಲಿಸಬೇಕು. 28 ಕ್ಷೇತ್ರದಲ್ಲಿ ಕಾಂಗ್ರೆಸ್ 21 ಜೆಡಿಎಸ್ ಗೆ 7 ಸ್ಥಾನ ಬಿಟ್ಟುಕೊಟ್ಟಿದ್ದೇವೆ. 28 ಕ್ಷೇತ್ರದಲ್ಲೂ ಮತ ಪ್ರಚಾರ ಮಾಡುತ್ತೇನೆ. ಕೋಮುವಾದಿ ಗಳ ವಿರುದ್ಧ ಹೆಚ್ಚು ಜನರಿದ್ದಾರೆ. ಆದರೆ ಬಿಜೆಪಿ ಗೆಲ್ಲಲ್ಲ. ಕರ್ನಾಟಕದಲ್ಲಿ ವೋಟರ್ಸ್ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ನಾವು ಮುಂದೆ ಇದ್ದೇವೆ. ಬಿಜೆಪಿಯಿಂದ ದೇಶಕ್ಕೆ ಅಪಾಯ ಇದೆ. ಮೋದಿ ಮಹಾ ನಾಟಕಕಾರ,  ಸುಳ್ಳಿನ ಪ್ರಧಾನಿ, ಅದೇ ದಾರಿನಲ್ಲಿ ಪ್ರತಾಪ್ ಸಿಂಹ ನಡೆಯುತ್ತಿದ್ದಾರೆ. ಕೆಲಸನೇ ಮಾಡದೆ ಒಂದು ಪುಸ್ತಕ ಹಿಡಿದು ಎಲ್ಲವನ್ನು ನಾನು ಮಾಡಿದ್ದೇನೆ ಅಂತ ಹೇಳಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಹಿಂದೂ ಧರ್ಮ ಇದ್ರೂ ಮನುಷ್ಯತ್ವ ಇರಬೇಕು. ಧರ್ಮ, ಜಾತಿ ಹೆಸರಿನಲ್ಲಿ ಪ್ರಜಾಪ್ರಭುತ್ವ ಒಡೆಯುವ ಕೆಲಸ ಬಿಜೆಪಿ ಮಾಡ್ತಿದೆ. ನರೇಂದ್ರ ಮೋದಿ ಏನು ಮಾಡಿಲ್ಲ. ಒಂದೇ ವೇದಿಕೆ ಸಿಕ್ಕಿದ್ರೆ ನಾನು ಮಾತಾಡಲು ಸಿದ್ಧ. ದೇಶದ ರಕ್ಷಣೆ, ಸಂವಿಧಾನ ಕಾಪಾಡುವ ಕೆಲಸವನ್ನು ಜನರು ಚುನಾಯಿತ ವ್ಯಕ್ತಿಗೆ ನೀಡುತ್ತಾರೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಒಟ್ಟಾರೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.

ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ ನಮ್ಮ ಹಳೆ ಪ್ರಾಂತ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ವಿರುದ್ಧವಾಗಿದ್ದೇವೆ. ಆದರೆ ವೈಯುಕ್ತಿಕವಾಗಿ ನಾವು ಚೆನ್ನಾಗಿದ್ದೇವೆ. ದಳದ ವಿರುದ್ಧ ಸೋತ ಸಿದ್ದರಾನಯ್ಯ ಸೋಲನ್ನು ಒಪ್ಪಿಕೊಳ್ಳದೆ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಗೆ ಬೆಂಬಲ ನೀಡಿದರು. ಜೆಡಿಎಸ್ ಕಾಂಗ್ರೆಸ್ ಒಂದಾದರೆ ಕೋಮು ಶಕ್ತಿ ತಡೆಗಟ್ಟಬಹುದು. ಕೋಮು ಸೌಹಾರ್ದತೆ ಕಾಪಾಡಬಹುದು. ವಿಜಯ್ ಶಂಕರ್ ಒಬ್ಬ ಉತ್ತಮ ಒಳ್ಳೆಯ ಅಭ್ಯರ್ಥಿ. 9ಲಕ್ಷ ಮತದಾರರು ಮೈಸೂರಿನಲ್ಲಿ ಇದ್ದಾರೆ. ಚಾಮರಾಜ ಕ್ಷೇತ್ರ ಕಾಂಗ್ರೆಸ್ ನ ಭದ್ರ ಕೋಟೆ. ಎರಡು ಪಕ್ಷದ ಮುಖಂಡರು. ಕಾರ್ಯಕರ್ತರು ವೈಯುಕ್ತಿಕ ವಿಚಾರ, ದ್ವೇಷ ಮರೆತು ಅಭ್ಯರ್ಥಿ ಗೆ ಬೆಂಬಲ ನೀಡಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ಮೈಸೂರು ಕ್ಲೀನ್ ಸಿಟಿ ಆಗಿದೆ. ಆದ್ರೆ ಮೋದಿ ಸರ್ಕಾರದಲ್ಲಿ ವಾರಣಾಸಿ ಕ್ಲೀನ್ ಸಿಟಿ ಆಗಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸಿದ ಅನೇಕ  ಯೋಜನೆಗಳನ್ನು ಅಭಿವೃದ್ಧಿ ಗೊಳಿಸಿದೆ. ಆದರೆ ಈ ಕೆಲಸಗಳನ್ನು ಬಿಜೆಪಿ ಮಾಡಿದ್ದು ಎಂದು ಹೇಳುತ್ತಿದೆ. ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರ ಅಧ್ಯಕ್ಷ ಆರ್. ಮೂರ್ತಿ, ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಸಿ. ಎಚ್ ವಿಜಯ್ ಶಂಕರ್, ಮಾಜಿ ಶಾಸಕ ವಾಸು,  ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: