ದೇಶ

ಕೋಕಾಕೋಲಾ ಮಾರುಕಟ್ಟೆಗೆ ತರಲಿದೆ ಮಜ್ಜಿಗೆ, ಲಸ್ಸಿ, ಮಾವಿನ ಜ್ಯೂಸ್

ಬೈ,ಮಾ.29-ಕೋಕಾಕೋಲಾ ಕಂಪನಿ ಮಜ್ಜಿಗೆ, ಲಸ್ಸಿ ಹಾಗೂ ಮಾವಿನ ಜ್ಯೂಸ್ ಅನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ.

ಈಗಾಗಲೇ ಜಲ್ಜೀರಾ ಬಿಡುಗಡೆ ಮಾಡಿದ್ದ ಕಂಪನಿ ಈಗ ಮಜ್ಜಿಗೆ, ಲಸ್ಸಿ ಮತ್ತು ಮಾವಿನ ಜ್ಯೂಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಕೋಕಾಕೋಲಾ, 2020 ರ ಸುಮಾರಿಗೆ ಮಜ್ಜಿಗೆ ಮತ್ತು ಲಸ್ಸಿ, ಮಾವಿನ ಜ್ಯೂಸ್ ಮಾರಾಟ ಮಾಡಲು ಯೋಚಿಸುತ್ತಿದೆ. ಭಾರತ ಮತ್ತು ನೈಋತ್ಯ ಏಷ್ಯಾದ ಮುಖ್ಯಸ್ಥ ಟಿ.ಕೃಷ್ಣಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಗ್ರಾಹಕರು ಇತ್ತೀಚಿಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿದ್ದಾರೆ. ಹಾಗಾಗಿಯೇ ಸಕ್ಕರೆ ಮುಕ್ತ ಉತ್ಪನ್ನಗಳನ್ನು ಖರೀದಿಸಲು ಮುಂದಾಗ್ತಿದ್ದಾರೆ ಎಂದ್ರು.

ಕಂಪನಿ ಶೀಘ್ರವೇ ಮಿನಿಟ್ಮೇಡ್ ಆಯಪಲ್ ಜ್ಯೂಸ್ ಶುರು ಮಾಡಲಿದೆಯಂತೆ. ಇದ್ರಲ್ಲಿ ಶೇ.25 ರಷ್ಟು ಸೇಬಿನ ರಸವಿರಲಿದೆಯಂತೆ. 250 ಎಂಎಲ್ ಹಾಗೂ 600 ಎಂಎಲ್ ಪ್ಯಾಕ್ ಸಿಗಲಿದೆ. 250 ಎಂಎಲ್ ಪ್ಯಾಕ್ ಗೆ 25 ರೂಪಾಯಿ ಹಾಗೂ 600 ಎಂಎಲ್ ಪ್ಯಾಕ್ ಗೆ 40 ರೂಪಾಯಿಯಿರಲಿದೆಯಂತೆ. ಭಾರತದ 29 ರಾಜ್ಯಗಳು 29 ದೇಶಗಳಿಗೆ ಸಮ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಂಸ್ಕೃತಿ, ಭಾಷೆಯಿದೆ. ಯಾವುದೇ ದೊಡ್ಡ ಕಂಪನಿ ಪಾನೀಯ ಕ್ಷೇತ್ರಕ್ಕೆ ಕೈ ಹಾಕಿಲ್ಲ. ಕೆಲವೇ ಕೆಲವು ಕಂಪನಿಗಳು ಸ್ಪರ್ಧೆ ನೀಡಲಿವೆ ಎಂದು ಕೃಷ್ಣಕುಮಾರ್ ಹೇಳಿದ್ದಾರೆ. (ಎಂ.ಎನ್)

 

Leave a Reply

comments

Related Articles

error: