ಕರ್ನಾಟಕಪ್ರಮುಖ ಸುದ್ದಿ

ಶೋಭಾ ಯಾವ ಸಾಧನೆ ಹೇಳಿಕೊಂಡು ಮತ ಕೇಳ್ತಾರೆ? ಭೋಜೇಗೌಡ ಪ್ರಶ್ನೆ

ಚಿಕ್ಕಮಗಳೂರು (ಮಾ.29): ಗೋ-ಬ್ಯಾಕ್ ಶೋಭಾ ಎನ್ನುತ್ತಿದ್ದ ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ತಮ್ಮ ಅಭ್ಯರ್ಥಿ ಪರ ಮತ ಕೇಳುತ್ತಾರೆ ಎಂದು ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ತಿರಸ್ಕರಿಸಿದವರಿಗೆ ಮತ್ತೆ ಪಕ್ಷ ಟಿಕೆಟ್ ನೀಡಿದೆ. ಈಗ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದು. ಕಳೆದ 5ವರ್ಷಗಳಲ್ಲಿ ಕ್ಷೇತ್ರದಲ್ಲಿ ಏನು ಮಾಡದೇ, 2ನೇ ಬಾರಿಗೆ ಮತದಾರರ ಬಳಿ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ ಎಂದು ಹೇಳಿದರು.

ರಾಜಕೀಯ ದ್ವೇಷಕ್ಕೆ ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಐಟಿ ದಾಳಿ ಮಾಡುವುದು ಹೊಸದೇನಲ್ಲ ಆದರೆ ರಾಜಕೀಯ ದ್ವೇಷದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ. ವಿರೋಧ ಪಕ್ಷವನ್ನು ಗುರಿಯಾಗಿಟ್ಟು ಕೊಂಡು. ನಡೆಸುತ್ತಿರುವ ಐಟಿ ರೇಡನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷ ಖಂಡಿಸುತ್ತದೆ. ದಾಳಿಯಿಂದ ಯಾರನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.

ಅನಂತ್ ಕುಮಾರ್‍ಗೆ ಅವಮಾನ!

ದಿವಂಗತ ಅನಂತಕುಮಾರ್ ಅವರ ಸಾಧನೆಯನ್ನು ಬಿಜೆಪಿ ಕಡೆಗಣಿಸಿ ಅವರ ತತ್ವ, ಸಿದ್ದಾಂತಗಳನ್ನು ಅಳವಡಿಕೊಳ್ಳಬೇಕೆಂದು ಬೊಬ್ಬೆ ಹಾಕಿ ಅವರ ಪತ್ನಿ ತೇಜಸ್ವಿನಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ. ತೇಜಸ್ವಿ ಸೂರ್ಯ ಎಂಬುವರಿಗೆ ಟಿಕೆಟ್ ನೀಡಿ ಇದರಿಂದ ಬಿಜೆಪಿ ಹಿಡನ್ ಅಜೆಂಡ್ ಎಂಬುವುದು ಇದರಿಂದ ತಿಳಿಯುತ್ತದೆ.

ಕೋಮುಗಲಭೆ ಮೂಲಕ ಅಧಿಕಾರ ಹಿಡಿಯುವ ಹುನ್ನಾರ ನಡೆಯುತ್ತಿದೆ. ಬೆಂಗಳೂರು ಕ್ಷೇತ್ರದಲ್ಲಿ ಕೋಮುಗಲಭೆ ನಡೆದರೆ ಅದಕ್ಕೆ ಇವರೇ ಕಾರಣರಾಗುತ್ತಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯಕುಮಾರ್ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್, ಜೆಡಿಎಸ್, ಸಿಪಿಐ ಪಕ್ಷಗಳ ಹೊಂದಾಣಿಯೊಂದಿಗೆ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಈ ಹಿನ್ನಲೆಯಲ್ಲಿ 3 ಪಕ್ಷವನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಎಂದರು.

3 ಪಕ್ಷದ 11 ಜನ ಮುಖಂಡರು ಸಮಿತಿಯ ಸದಸ್ಯರಾಗಿದ್ದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಪರ ಕೆಲಸ ಮಾಡಲಾಗುವುದು ಇಂದಿನಿಂದ 2 ದಿನ ಪ್ರಮೋದ ಮಧ್ವರಾಜ್ ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು ಮೂಡಿಗೇರೆ ತಾಲೂಕಿನಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಿ ಮತಯಾಚಿಸಲಿದ್ದಾರೆ ಎಂದು ತಿಳಿಸಿದರು. ಎಐಸಿಸಿ ಕಾರ್ಯದರ್ಶಿ ಬಿ.ಎಮ್.ಸಂದೀಪ್, ಮುಖಂಡರಾದ ಶಿವಾನಂದಸ್ವಾಮಿ, ಚಂದ್ರಪ್ಪಮ ರೇಣುಕಾರಾಧ್ಯ ಮೊದಲಾದವರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: