ದೇಶ

ಚುನಾವಣಾ ಆಯೋಗದ ಮನವಿ ತಳ್ಳಿ ಹಾಕಿದ ಆರ್.ಬಿ.ಐ

ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಯ ಖರ್ಚಿಗೆ ಹಣ ಬೇಕಾಗಲಿದ್ದು, ಈಗ ಇರುವ ವಾರದ ವಿಥ್ ಡ್ರಾ ಮಿತಿಯನ್ನು ಹೆಚ್ಚಿಸಿ ಎಂದು ರಿಸರ್ವ ಬ್ಯಾಂಕ್ ಇಂಡಿಯಾಕ್ಕೆ ಮನವಿ ಸಲ್ಲಿಸಿತ್ತು. ಆದರೆ ಆಯೋಗದ ಮನವಿಯನ್ನು ಬ್ಯಾಂಕ್ ತಳ್ಳಿ ಹಾಕಿದ್ದು, ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ಚೆಕ್  ಹಾಗೂ ಡಿಜಿಟಲ್ ಪಾವತಿಯನ್ನೇ ಮಾಡಬೇಕಾಗಿದೆ.

ವಾರಕ್ಕೆ ಈಗ 24ಸಾವಿರ ಮಾತ್ರ ಡ್ರಾ ಮಾಡಲು ಅವಕಾಶವಿದ್ದು, ಗೋವಾ, ಮಣಿಪುರ್, ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ರಿಸರ್ವ್ ಬ್ಯಾಂಕ್ ಗೆ  ಮಿತಿಯನ್ನು 2ಲಕ್ಷಕ್ಕೆ ಹೆಚ್ಚಿಸಲು ಮನವಿ ಸಲ್ಲಿಸಿತ್ತು.

ಚುನಾವಣಾ ಆಯೋಗ ಹಾಗೂ ತೆರಿಗೆ ಅಧಿಕಾರಿಗಳು ಚುನಾವಣಾ ಸಂದರ್ಭ ಮಾಡುವ ಖರ್ಚಿನ ಮೇಲೆ ಕಣ್ಣಿರಿಸಿದ್ದು, ಅಭ್ಯರ್ಥಿಗಳು ಖರ್ಚು ವೆಚ್ಚಕ್ಕೆ ಸಂಬಂಧಿಸಿದ ಹಾಗೆ ಖಾತೆ ತೆರೆಯಬೇಕಿದೆ.

Leave a Reply

comments

Related Articles

error: