ಪ್ರಮುಖ ಸುದ್ದಿಮೈಸೂರು

ಅರ್ಜುನ ಅವಧೂತ ಗುರು ಮಹರಾಜರನ್ನು ಭೇಟಿಯಾಗಿ ತಾಯಿ ಚಾಮುಂಡಿಯ ದರ್ಶನ ಪಡೆದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ

ಮೈಸೂರು,ಮಾ.30:- ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಇಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮೈಸೂರಿನ ಸೋನಾರ್ ಬೀದಿಯಲ್ಲಿ ಇರುವ  ಅರ್ಜುನ ಅವಧೂತ ಗುರು ಮಹರಾಜರ ಸ್ವ ಗೃಹಕ್ಕೆ   ಭೇಟಿ  ನೀಡಿ ಆಶೀರ್ವಾದ ಪಡೆದರು.

ನಂತರ ಅವಧೂತರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಪ್ರಶಾಂತ  ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಟಿಕೆಟ್ ಹಂಚಿಕೆಗೆ ಮೊದಲೇ ತೇಜಸ್ವಿನಿ ಸೂರ್ಯ, ಮೈಸೂರಿನ ಅರ್ಜುನ ಅವಧೂತ್ತ ರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದರು. ಈ ವೇಳೆ ಬಿಜೆಪಿ ಮುಖಂಡ ಜೋಗಿ ಮಂಜು, ಹರ್ಷ,ಸಂದೀಪ್ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: