ಮೈಸೂರು

ನೀತಿ ಸಂಹಿತೆ ಜಾರಿಯಾದ ಬಳಿಕ ಮೈಸೂರು ಜಿಲ್ಲೆಯಲ್ಲಿ 10,79,300 ನಗದು ಹಣ ಜಪ್ತಿ : 1,09,37,050 ರೂ. ಮದ್ಯ ವಶ

ಮೈಸೂರು,ಮಾ.30:- ಲೋಕಸಭಾ ಚುನಾವಣೆ 2019 ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳು  ಹೈಅಲರ್ಟ್ ನಲ್ಲಿದ್ದಾರೆ.

ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಹದ್ದಿನಕಣ್ಣಿರಿಸಿದ್ದು, ನೀತಿ ಸಂಹಿತೆ ಜಾರಿಯಾದ ಬಳಿಕ ಮೈಸೂರು ಜಿಲ್ಲೆಯಲ್ಲಿ ಈವರೆಗೂ  ದಾಖಲೆಗಳಿಲ್ಲದ 10,79,300 ನಗದು ಹಣ ಜಪ್ತಿ ಮಾಡಲಾಗಿದೆ. 1,09,37,050 ರೂಪಾಯಿ ಬೆಲೆ ಬಾಳುವ 20,964 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.  ಸ್ಕೂಟರ್, ಆಟೋ , ಕಾರ್ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ 62 ವಾಹನಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಒಟ್ಟು 388 ಅಬಕಾರಿ ಇಲಾಖೆಯಲ್ಲಿ, 38ಪೊಲೀಸ್ ಇಲಾಖೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣಮಾಡಲಾಗಿದೆ.  ಫ್ಲೈಯಿಂಗ್ ಸ್ಕ್ವಾಡ್, ವಿಜಿಲೆನ್ಸಿ ಟೀಂ ಹಾಗೂ ಪೊಲೀಸರು ಅಕ್ರಮ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: