ಕ್ರೀಡೆ

ಚೆನ್ನೈ ಸೂಪರ್ ಕಿಂಗ್ಸ್ ಶಾಕ್

ಚೆನ್ನೈ,ಮಾ.30-ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವು ಎದುರು ನೋಡುತ್ತಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಗೆ ಸಂಕಷ್ಟ ಎದುರಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವಿದೇಶಿ ವೇಗಿ ಡೇವಿಡ್ ವಿಲೆ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಡೇವಿಡ್ ವಿಲೆ ತವರಿಗೆ ವಾಪಾಸ್ಸಾಗಿದ್ದಾರೆ.

2018ರಲ್ಲಿ ಚೆನ್ನೈ ಪರ ಆಡಿದ್ದ ಡೇವಿಡ್ ವಿಲೆ ಬಳಿಕ ಯಾರ್ಕ್‌ಶೈರ್ ಕೌಂಟಿ ಕ್ರಿಕೆಟ್ ಆಡಿದ್ದರು. ಇದೀಗ 12ನೇ ಆವೃತ್ತಿಯಲ್ಲೂ ಅಬ್ಬರಿಸಲು ರೆಡಿಯಾಗಿದ್ದ ವೇಗಿ, ದಿಢೀರ್ ಹಿಂದೆ ಸರಿದಿದ್ದಾರೆ. ಕಳೆದ ವರ್ಷ ಕೇದಾರ್ ಜಾಧವ್ ಗಾಯದ ಸಮಸ್ಯೆಯಿಂದ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಜಾಧವ್ ಬದಲು ಡೇವಿಡ್ ವಿಲೆ ಆಯ್ಕೆಯಾಗಿದ್ದರು. ಸೌತ್‌ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಬಳಿಕ ಇದೀಗ ಡೇವಿಡ್ ವಿಲೆ ಸೇವೆ ಚೆನ್ನೈಗೆ ಲಭ್ಯವಿಲ್ಲ. (ಎಂ.ಎನ್)

Leave a Reply

comments

Related Articles

error: