ಸುದ್ದಿ ಸಂಕ್ಷಿಪ್ತ

ಮಂಡ್ಯಗೆ ಶಾಶ್ವತ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ

ಮೈಸೂರು,ಮಾ.30 : ಮೈಸೂರು-ಬೆಂಗಳೂರು ಹಾದು ಹೋಗುವ ಮಂಡ್ಯ ಮುಖ್ಯರಸ್ತೆಗೆ ಶಾಶ್ವತವಾದ ಮೇಲ್ಸೇತುವೆಯನ್ನು ನಿರ್ಮಿಸಬೇಕೆಂದು ಲೇಖಕ ಬಿ.ಜಿ.ರಂಗೇಗೌಡರು ಒತ್ತಾಯಿಸಿದ್ದಾರೆ.

ಈ ರಸ್ತೆಯು ಸದಾಕಾಲ ವಾಹನ ಹಾಗೂ ಜನ ದಟ್ಟಣೆಯಿಂದ ಕೂಡಿದ್ದು ಟ್ರಾಫಿಕ್ ಜಾಮ್ ಆಗುತ್ತದೆ, ಅಲ್ಲದೇ ಮಂಡ್ಯಕ್ಕೆ ಹೊರವರ್ತುಲ ರಸ್ತೆಯೇ ಇಲ್ಲಾ ಆದ್ದರಿಂದ ಎರಡು ಕಿ.ಮೀ ದೂರ ಮೇಲ್ಸೇತುವೆಯನ್ನು ನಿರ್ಮಿಸಬೇಕೆಂದು ಕೋರಿದ್ದು, ಅಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದ ರಾಜಕಾರಣಿಗಳು ತಮ್ಮ ವೈಯುಕ್ತಿಕ ಟೀಕೆಗಳನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: