ಪ್ರಮುಖ ಸುದ್ದಿಮೈಸೂರು

ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಅರವಿಂದ್ ಲಿಂಬಾವಳಿ ಗರಂ

ಮೈಸೂರು,ಮಾ.31:- ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ಸಜ್ಜಾಗಿದೆ. 2 ಹಂತದಲ್ಲಿ ನಡೆಯುವ ಚುನಾವಣೆಗೆ ಈಗಾಗಲೇ ಕಾರ್ಯ ಚಟುವಟಿಕೆ ಆರಂಭಿದ್ದೇವೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಲಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಅರವಿಂದ್ ಲಿಂಬಾವಳಿ ಹೇಳಿದರು.

ಮೈಸೂರಿನಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಘೋಷಣೆ ಬಳಿಕ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಪ್ರಚಾರ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಏ.8ರಂದು ಮೈಸೂರಿಗೆ ‌ಆಗಮಿಸಲಿದ್ದಾರೆ. ಪ್ರಧಾನಿಯವರ ಜೊತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಎಲ್ಲಾ ಕಡೆ ಪ್ರಚಾರ ಆರಂಭಿಸಲಿದ್ದಾರೆ. ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ ಯೋಜನೆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

ಸಿದ್ದರಾಮಯ್ಯ ವಿರುದ್ಧ  ಗರಂ ಆದ ಅರವಿಂದ ಲಿಂಬಾವಳಿ  ಮೋದಿ ಸುಳ್ಳು ಹೇಳಿದ್ದಾರೆ ಅನ್ನೋ ಮೂಲಕ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ನರೇಂದ್ರ ಮೋದಿ ಕಳೆದ 5 ವರ್ಷಗಳಲ್ಲಿ ಏನು ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತು. ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ. ಮೋದಿ ಸುಳ್ಳುಗಾರ ಅನ್ನಲು ಹೋಗಿ ತಾನೊಬ್ಬ ಸುಳ್ಳುಗಾರ ಅನ್ನೋದನ್ನು ತೋರಿಸಿದ್ದಾರೆ. ದಯವಿಟ್ಟು ಮೋದಿ ಬಗ್ಗೆ ಮಾತನಾಡಬೇಡಿ. ಮೋದಿ ವಿರುದ್ಧ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಹೋಯ್ತು. ಮೋದಿ ವಿರುದ್ಧ ಮಾತನಾಡಿ ಕಾಂಗ್ರೆಸ್ 78 ಸ್ಥಾನಕ್ಕೆ ಬಂದಿದ್ದಾರೆ. ಜೆಡಿಎಸ್ ಜೊತೆ ಕೈ ಜೋಡಿಸಿ ಲೋಕಸಭೆಗೆ ಹೊರಟಿದ್ದಾರೆ. ಮೋದಿ ಬಗ್ಗೆ ಮತ್ತೆ ಮಾತನಾಡಿದ್ರೆ ಮತ್ತೆ ಅದನ್ನೂ ಕಳೆದುಕೊಳ್ಳುತ್ತಾರೆ. ತುಮಕೂರಿನಲ್ಲಿ ಈ ಬಾರಿ ನಾವು ಗೆಲುತ್ತೇವೆ. ಮುದ್ದ ಹನುಮೇಗೌಡ ವಾಪಸ್ ನಾಮಪತ್ರ ತೆಗೆದಿರೋದ್ರಿಂದ ಧೃತಿಗೆಟ್ಟಿಲ್ಲ. ಕಳೆದ ಬಾರಿ ನಾವು ತುಮಕೂರಿನಲ್ಲಿ ಸೋತಿದ್ವಿ. ಈ ಬಾರಿ ದೇವೇಗೌಡರ ವಿರುದ್ಧ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ಸಿಎಂ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ  ಸಿನಿಮಾ ನಟರ ಮನೆ ಮೇಲೆ ಐಟಿ ದಾಳಿಯಾದ ವೇಳೆ  ಅದೊಂದು ರೋಟಿನ್ ವರ್ಕ್ ಅಂದಿದ್ರು. ಐಟಿ ದಾಳಿ ಒಂದು ರೋಟಿನ್ ವರ್ಕ್ ಅಷ್ಟೇ. ಕಂಟ್ರ್ಯಾಕ್ಟರ್ ಮನೆ ಮೇಲೆ ಐಟಿ ದಾಳಿಯಾದ್ರೆ ಮುಖ್ಯಮಂತ್ರಿಗಳು ಯಾಕೆ ಪ್ರತಿಭಟನೆ ಮಾಡಿದ್ರು. ಕಂಟ್ರ್ಯಾಕ್ಟರ್ ಗಳಿಗೂ ಸಿಎಂ ಕುಮಾರಸ್ವಾಮಿಗೂ ಏನ್ ಸಂಬಂಧ.? ಮುಖ್ಯಮಂತ್ರಿಗಳು ಮೊದಲು ಅದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ಐಟಿ ಅಧಿಕಾರಿಗಳ ಕರ್ತವ್ಯ ಅವರು ಮಾಡಿದ್ದಾರೆ ನಮ್ಮ ಕೈವಾಡ ಇಲ್ಲ. ಮೋದಿ ಒಂದು ಮಾತು ಹೇಳಿದ್ರು. ಮೋದಿ ಭ್ರಷ್ಟಾಚಾರಿಗಳನ್ನು ಒಟ್ಟು ಮಾಡಿ ರಸ್ತೆಗೆ ಇಳಿಸ್ತೀನಿ ಅಂದಿದ್ರು. ಮೋದಿ ಮಾತು ಇವತ್ತು ನಿಜ ಎನಿಸುತ್ತಿದ್ದೆ. ಕಂಟ್ರಾಕ್ಟರ್ ಮನೆ ಮೇಲೆ ದಾಳಿಯಾದ್ರೆ. ನೀವ್ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ..? ಐಟಿ ವಿರುದ್ಧ ಮೈತ್ರಿ ಪ್ರತಿಭಟನೆಗೆ  ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: