ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳ್ಳರ ಕೈಚಳಕ : 2.5 ಲಕ್ಷರೂ.ಮೌಲ್ಯದ ಚಿನ್ನಾಭರಣ ಕಳುವು

ಮೈಸೂರು,ಏ.1:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳ್ಳರು ಕೈಚಳಕ ತೋರಿದ್ದು ಒಂದೇ ದಿನ ಎರಡು ಮನೆಗಳಲ್ಲಿ ಕಳ್ಳರು  ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಗಾಯತ್ರಿಪುರಂ‌ನ ಮೊದಲನೇ ಹಂತದ 4-5 ನೇ ಕ್ರಾಸ್ ನಲ್ಲಿ  ಈ ಕಳ್ಳತನ ನಡೆದಿದೆ.  ಬಿಜೆಪಿ ಮುಖಂಡ ಶಿವಾನಂದ್ ಹಾಗೂ ಲೀಲಾವತಿ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ.

ಒಂದು ಮನೆಯಲ್ಲಿ  ಡೋರ್   ಲಾಕ್  ಹಾಗೂ ಮತ್ತೊಂದು ಮನೆಯಲ್ಲಿ ಹಿಂಬಾಗಿಲನ್ನು ಒಡೆದು ಕಳ್ಳರು ಕೈ ಚಳಕ ತೋರಿದ್ದಾರೆ.  ಮನೆಯಲ್ಲಿದ್ದ ಎರಡು ಬೀರುಗಳನ್ನು  ಒಡೆದ ಕಳ್ಳರು  ಒಂದು ಬೀರುವಿನಲ್ಲಿದ್ದ ಸುಮಾರು 2.5ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮತ್ತೊಂದರಲ್ಲಿದ್ದ  3000ರೂ.ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಮನೆಯಲ್ಲಿ  ಯಾರೂ ಇಲ್ಲದ ಕಾರಣ ಎಷ್ಟು ಕಳುವಾಗಿದೆ ಎಂಬ ನಿಖರ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.  ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ  ಈ ಕೃತ್ಯವೆಸಗಿದ್ದು,   ನಜರ್ ಬಾದ್  ಪೋಲಿಸರು ಆಗಮಿಸಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: