ಪ್ರಮುಖ ಸುದ್ದಿ

ಮಂಡ್ಯ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅವರ ವಾಹನ ಒಂದೇ ದಿನ ನಾಲ್ಕು ಬಾರಿ ತಪಾಸಣೆ !

ರಾಜ್ಯ(ಮಂಡ್ಯ)ಏ.1:- ಮಂಡ್ಯ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅವರ ಮೇಲೆ ಅಧಿಕಾರಿಗಳೇನಾದರೂ ಸವಾರಿ ನಡೆಸಿದ್ದಾರಾ ಹೀಗೊಂದು ಪ್ರಶ್ನೆ ಇದೀಗ ಮಂಡ್ಯ ಜನತೆಯಲ್ಲೆದ್ದಿದೆ.

ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅವರು ಪ್ರಚಾರಕ್ಕೆ ತೆರಳಿದ ವೇಳೆ ಅವರ ವಾಹನವನ್ನು ಪದೇ ಪದೇ ತಪಾಸಣೆಗೊಳಪಡಿಸಿದ ಟಾರ್ಚರ್ ನೀಡಿದ ಘಟನೆ ನಡೆದಿದೆ ಎನ್ನಲಾಗಿದೆ.  ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಬರುವ ದುದ್ದ, ಶಿವಳ್ಳಿ, ಭೆವು ಕಲ್ಲು ಸೇರಿದಂತೆ ಹಲವೆಡೆ ಪ್ರಚಾರಕ್ಕೆ ತೆರಳುತ್ತಿದ್ದಾಗ ಸುಮಲತಾ ಅವರಿದ್ದ ವಾಹನವನ್ನು ಒಂದೇ ದಿನ ನಾಲ್ಕು ಬಾರಿ ತಪಾಸಣೆ ಮಾಡಲಾಗಿದೆಯಂತೆ. ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜ, ಮತ್ತಿತರರ ಅಧಿಕಾರಿಗಳ ತಂಡ ಸುಮಲತಾ ಅವರಿದ್ದ ವಾಹನವನ್ನು ತಡೆದು ಲೈಸೆನ್ಸ್ ಪರಿಶೀಲಿಸಿ, ಕಾರಿನಲ್ಲಿದ್ದ ವಸ್ತುಗಳೆಲ್ಲವನ್ನೂ ಪರಿಶೀಲಿಸಿದರು ಎನ್ನಲಾಗಿದೆ.  ಸುಮಲತಾ ಅವರ ವಾಹನವನ್ನು ಉದ್ದೇಶಪೂರ್ವಕವಾಗಿಯೇ ಪದೇ ಪದೇ ತಪಾಸಣೆ ಮಾಡಲಾಗುತ್ತಿದೆ ಎಂದು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: