
ಕರ್ನಾಟಕ
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಬೀಳಗಿ,ಏ.1-ಸಾಲಬಾಧೆ ತಾಳಲಾರದೆ ರೈತನೊಬ್ಬ ಕಬ್ಬಿನ ಹೊಲದಲ್ಲಿ ರವದಿ ಮಧ್ಯೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ನಡೆದಿದೆ.
ಹಣಮಂತ ರಂಗಪ್ಪ ಜಾನಮಟ್ಟಿ (62) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ನಾನಾ ಬ್ಯಾಂಕ್ಗಳಿಂದ ಒಟ್ಟು 5.50 ಲಕ್ಷ ರೂ. ಗಳಿಗಿಂತಲೂ ಅಧಿಕ ಸಾಲ ಪಡೆದಿದ್ದ. ಈ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ರೈತನಿಗೆ ಪತ್ನಿ ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ವಿಷಯ ತಿಳಿದು ತಹಸಿಲ್ದಾರ್ ಅಮರೇಶ ಬಿರಾದಾರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸಿಪಿಐ ರವಿಚಂದ್ರ ಡಿ.ಬಿ.ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. (ಎಂ.ಎನ್)